ಪಂಚಾಯತಿ ಚುನಾವಣೆ ಯುದ್ಧಭೂಮಿಯಾದ ಪಶ್ಚಿಮ ಬಂಗಾಳ ಕನಿಷ್ಠ 14 ಜನರ ಸಾವು!

masthmagaa.com:

ಪಶ್ಚಿಮ ಬಂಗಾಳದಲ್ಲಿ ಮೂರು ಹಂತದ ಪಂಚಾಯತಿ ಚುನಾವಣೆ ವೇಳೆ ಭಾರಿ ಹಿಂಸಾಚಾರ ನಡೆದಿದ್ದು, ಕನಿಷ್ಠ 14 ಜನ ಮೃತಪಟ್ಟಿದ್ದಾರೆ. ಈ ಹಿಂಸಾಚಾರದಲ್ಲಿ 6 ಜನ TMC ಸದಸ್ಯರು ಸೇರಿ, ಬಿಜೆಪಿ, ಕಾಂಗ್ರೆಸ್‌ ಹಾಗೂ ISFನ ಕಾರ್ಯಕರ್ತರು ಮೃತಪಟ್ಟಿದ್ದಾರೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೊಂದ್‌ ಕಡೆ 24 ಪರಗಣ ಜಿಲ್ಲೆಯಲ್ಲಿ ಮತದಾನ ಸಂದರ್ಭದಲ್ಲಿ ದುಷ್ಕರ್ಮಿಗಳು ಇಟ್ಟಿದ್ದ ಕಚ್ಚಾ ಬಾಂಬ್‌ ಸ್ಫೋಟಗೊಂಡಿದ್ದು, ಇಬ್ಬರು ಮಕ್ಕಳು ಸೇರಿ ಹಲವರು ಗಾಯಗೊಂಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಇನ್ನಷ್ಟು ಸ್ಫೋಟಕಗಳು ಇರುವ ಶಂಕೆ ವ್ಯಕ್ತವಾಗಿದ್ದು, ಶೋಧ ಕಾರ್ಯ ನಡೆಸಲಾಗ್ತಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಘಟನೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿಭಟನೆ ನಡೆಸಿದ್ದಾರೆ. ಮತ್ತೊಂದ್‌ ಕಡೆ ಪಶ್ಚಿಮ ಬಂಗಾಳ ರಾಜ್ಯಪಾಲ ಡಾ.ಸಿ.ವಿ.ಆನಂದ ಬೋಸ್ ಅವ್ರು ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದು, ಪರಿಸ್ಥಿತಿಯನ್ನ ಪರಿಶೀಲನೆ ನಡೆಸಿದ್ದಾರೆ. ಇತ್ತ ಪಶ್ಚಿಮ ಬಂಗಾಳದಲ್ಲಿ ನಡಿತಿರೋ ರಕ್ತಪಾತಕ್ಕೆ ಅಲ್ಲಿನ ರಾಜ್ಯ ಚುನಾವಣಾ ಆಯೋಗ ಹಾಗೂ ಸಿಎಂ ಮಮತಾ ಬ್ಯಾನರ್ಜಿ ಅವ್ರೇ ಹೊಣೆ ಅಂತ ಬಿಜೆಪಿ ಆರೋಪ ಮಾಡಿದೆ. ಜೊತೆಗೆ TMC ಗೂಂಡಾಗಳು ಇಂಡಿಪೆಂಡೆಂಟ್‌ ಅಭ್ಯರ್ಥಿಯೊಬ್ರಿಗೆ ಓಪನ್‌ ಆಗಿ ಬಂದೂಕು ತೋರಿಸೋ ಮೂಲಕ ಬೆದರಿಕೆ ಹಾಕುತ್ತಿದ್ದಾರೆ ಅಂತ ವಿಡಿಯೋ ಒಂದನ್ನ ಬಿಜೆಪಿ IT ಸೆಲ್‌ ಮುಖ್ಯಸ್ಥ ಅಮಿತ್‌ ಮಾಳ್ವಿಯಾ ಶೇರ್‌ ಮಾಡಿದ್ದಾರೆ. ಅಲ್ದೆ ಈ ಯುದ್ಧ ರೀತಿಯ ಪರಿಸ್ಥಿತಿ ನೋಡಿದ್ರೆ ಮಮತ ಬ್ಯಾನರ್ಜಿ ಅವ್ರ ಆಡಳಿತದಲ್ಲಿ ವೆಸ್ಟ್‌ ಬೆಂಗಾಲ್‌ ಹೇಗೆ ನೇತೃತ್ವದಲ್ಲಿ ಕಾನೂನು ಯಾವ ರೀತಿ ಕೆಲಸ ಮಾಡುತ್ತೆ ಅನ್ನೋದು ನೆನಪಿಸುತ್ತೆ ಅಂತ ಮಾಳ್ವಿಯಾ ವಾಗ್ದಾಳಿ ನಡೆಸಿದ್ದಾರೆ. ಇನ್ನೊಂದ್‌ ಕಡೆ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರೋ CPI ನಾಯಕ ಎಂಡಿ ಸಲೀಮ್‌, ಕೇಂದ್ರ ಹಾಗೂ ಅಲ್ಲಿನ ರಾಜ್ಯ ಪೊಲೀಸ್‌ ಪಡೆಗಳು ವಿಫಲತೆಯಿಂದ ಉಂಟಾಗಿದ್ದು, ಒಟ್ನಲ್ಲಿ ಕೆಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಕೋಆರ್ಡಿನೇಷನ್‌ ಕೊರತೆಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಅಂತ ಹೇಳಿದ್ದಾರೆ. ಆದ್ರೆ ಪಶ್ಚಿಮ ಬಂಗಾಳದ ಹಲವು ಕಡೆ ಮತಗಟ್ಟೆಗಳಿಗೆ ಹಾನಿ ಮಾಡಲಾಗಿದ್ದು, ಇದಕ್ಕೆಲ್ಲಾ ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯವೇ ಕಾರಣ ಅಂತ ಆಡಳಿತಾರೂಢ TMC ಆರೋಪಿಸಿದೆ.

-masthmagaa.com

Contact Us for Advertisement

Leave a Reply