ʻದೊಕ್ಸುರಿʼ ಚಂಡಮಾರುತಕ್ಕೆ ಚೀನಾ ತತ್ತರ!

masthmagaa.com:

ಚೀನಾ ರಾಜಧಾನಿ ಬೀಜಿಂಗ್‌ಗೆ ʻದೊಕ್ಸುರಿʼ ಚಂಡಮಾರುತ ಅಪ್ಪಳಿಸಿದ್ದು, ಧಾರಾಕಾರ ಮಳೆ ಸುರಿಯುತ್ತಿದೆ. ಚಂಡಮಾರುತದ ಪರಿಣಾಮದಿಂದ ಬೀಜಿಂಗ್‌ನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದ್ದು, ಭೂಕುಸಿತ ಪ್ರಕರಣಗಳು ವರದಿಯಾಗುತ್ತಿವೆ. ಮಳೆ ಸಂಬಂಧಿತ ಘಟನೆಗಳಲ್ಲಿ ಕನಿಷ್ಠ 11 ಜನ ಮೃತಪಟ್ಟಿದ್ದು, 27 ಜನರು ಕಾಣೆಯಾಗಿದ್ದಾರೆ ಅಂತ ಅಲ್ಲಿನ ಸರ್ಕಾರಿ ಮಾಧ್ಯಮ ವರದಿ ಮಾಡಿದೆ. ಅತಿಯಾದ ಮಳೆ ಹಾಗೂ ಗಾಳಿ ಕಾರಣದಿಂದ ಬೀಜಿಂಗ್‌ ರೈಲ್ವೆ ಸ್ಟೇಷನ್‌ನಲ್ಲಿ ನೂರಾರು ಪ್ರಯಾಣಿಕರು ಸಿಕ್ಕಿಬಿದ್ದಿದ್ದಾರೆ. ಈ ಪ್ರಯಾಣಿಕರಿಗೆ ಫುಡ್‌ ಪ್ಯಾಕೇಜ್‌ಗಳನ್ನ ನೀಡೋಕೆ ಹಾಗೂ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲು ರಕ್ಷಣಾ ಪಡೆಗಳು ಮತ್ತು ಹೆಲಿಕಾಪ್ಟರ್‌ಗಳನ್ನ ನಿಯೋಜಿಸಲಾಗಿದೆ. ಅಲ್ದೆ ಭಾರಿ ಮಳೆಯಿಂದ ಬೀಜಿಂಗ್‌ನ ಫಾಂಗ್‌ಶಾನ್‌ ಮತ್ತು ಮೆಟೌಂಗೌ ಸೇರಿದಂತೆ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ರೈಲುಗಳು ಮಾರ್ಗ ಮಧ್ಯದಲ್ಲೇ ಸಿಕ್ಕಿಕೊಂಡಿದ್ದು, ಕೆಲವು ಪ್ರದೇಶಗಳಲ್ಲಿ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ ಅಂತ ಅಲ್ಲಿನ ಸ್ಟೇಟ್‌ ಮೀಡಿಯ ವರದಿ ಮಾಡಿದೆ. ಅಂದ್ಹಾಗೆ ಬೀಜಿಂಗ್‌ನಲ್ಲಿ ಇದೇ ರೀತಿಯ ಪ್ರವಾಹ 2012ರಲ್ಲಿ ಉಂಟಾಗಿದ್ದು, ಆ ಟೈಮ್‌ನಲ್ಲಿ 79 ಜನರು ಮೃತಪಟ್ಟಿದ್ದರು. ಆದ್ರೆ ಈ ಚಂಡಮಾರುತದಿಂದ ಉಂಟಾಗಿರೋ ಪ್ರವಾಹ ಇನ್ನೂ ವರ್ಸ್ಟ್‌ ಆಗೋ ಸಾಧ್ಯತೆಯಿದೆ ಅಂತ ತಜ್ಞರು ಎಚ್ಚರಿಸಿದ್ದಾರೆ.

-masthmagaa.com

Contact Us for Advertisement

Leave a Reply