ಪಿಂಚಣಿ ಸಿಗ್ತಿಲ್ಲ! 110 ವರ್ಷದ ವೃದ್ಧೆಗೆ ಕೊನೆಗೂ ಸರ್ಕಾರದ ಸಾಥ್‌!

masthmagaa.com:

ಆಧಾರ್‌ ಕಾರ್ಡ್‌ ಇಲ್ಲ ಅನ್ನೋ ಕಾರಣಕ್ಕೆ ಬೀದರ್‌ನ 110 ವಯಸ್ಸಿನ ವೃದ್ಧೆ ಲಕ್ಷ್ಮೀಬಾಯಿ ಮಹಾಪುರೆ ಅವ್ರಿಗೆ ಬರ್ತಿದ್ದ ವೃದ್ಧಾಪ್ಯ ಪಿಂಚಣಿಯನ್ನ ಸ್ಟಾಪ್‌ ಮಾಡಲಾಗಿದೆ. ಅಲ್ದೇ ನ್ಯಾಯಬೆಲೆ ಅಂಗಡಿಯಿಂದ ಸಿಗೋ ದಿನಸಿಯಿಂದಲೂ ಇವ್ರು ವಂಚಿತರಾಗಿದ್ರು. ಜೊತೆಗೆ ವೋಟರ್ಸ್‌ ಲಿಸ್ಟ್‌ನಿಂದಲೂ ಇವ್ರನ್ನ ಹೊರಹಾಕಲಾಗಿತ್ತು. ಒಂದು ರೀತಿಯಲ್ಲಿ ಭಾರತೀಯ ಪ್ರಜೆಗಳಿಗೆ ಸಿಗಬೇಕಾದ ಎಲ್ಲಾ ರೀತಿಯ ಸೌಲಭ್ಯಗಳನ್ನ ಇವ್ರಿಂದ ಕಸಿದುಕೊಳ್ಳಲಾಗಿತ್ತು. ಆದ್ರೆ ಇದೀಗ ಈ ವೃದ್ಧೆಯ ಕಷ್ಟ ಕೇಳಿ ಅಲ್ಲಿನ ಕಂದಾಯ ಅಧಿಕಾರಿಗಳು ಸ್ಪಂದಿಸಿದ್ದಾರೆ. ಲಕ್ಷ್ಮೀಬಾಯಿ ಮಹಾಪುರೆ ಅವ್ರನ್ನ ಖುದ್ದಾಗಿ ಭೇಟಿ ಮಾಡಿ, ಎಲ್ಲಾ ರೀತಿಯ ಬೆನಿಫಿಟ್‌ಗಳು ಅವ್ರ ಮನೆ ಬಾಗಿಲ ಬಳಿ ಬರುತ್ತೆ ಅಂತ ಮಾತು ಕೊಟ್ಟಿದ್ದಾರೆ. ಇನ್ನು ಈ ವೃದ್ಧೆಯ ಮಗ ಧಶರಥ್‌ ಮಹಾಪುರೆ, ʻಲಕ್ಷ್ಮೀಬಾಯಿ ಅವ್ರಿಗೆ 100 ವರ್ಷ ಆಗೋವರೆಗೆ ಎಲ್ಲಾ ಸೌಲಭ್ಯಗಳು ಸಿಗ್ತಿದ್ವು. ಆದ್ರೆ 100 ವರ್ಷದ ನಂತ್ರ ಎಲ್ಲವೂ ಒಮ್ಮಲೆ ಸ್ಟಾಪ್‌ ಆದ್ವು ಅಂದಿದ್ದಾರೆ.

-masthmagaa.com

Contact Us for Advertisement

Leave a Reply