ಮಧ್ಯಾಹ್ನದ ಹೆಲ್ತ್​ ಬುಲೆಟಿನ್: ರಾಜ್ಯದಲ್ಲಿ ಕೊರೋನಾಗೆ ಮತ್ತೊಬ್ಬರು ಬಲಿ

masthmagaa.com:

ರಾಜ್ಯದಲ್ಲಿ ನಿನ್ನೆ ಸಂಜೆ 5 ಗಂಟೆಯಿಂದ ಇಂದು ಮಧ್ಯಾಹ್ನದವರೆಗೆ 122 ಕೊರೋನಾ ಪ್ರಕರಣಗಳು ದೃಢಪಟ್ಟಿವೆ ಅಂತ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,405ಕ್ಕೆ ಏರಿಕೆಯಾಗಿದೆ. ಯಾದಗಿರಿಯಲ್ಲಿ ಕೊರೋನಾ ಸೋಂಕಿತ 69 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 45ಕ್ಕೆ ಏರಿಕೆಯಾಗಿದೆ.

ಹೊಸದಾಗಿ ಪತ್ತೆಯಾದ 122 ಪ್ರಕರಣಗಳಲ್ಲಿ ಬರೋಬ್ಬರಿ 108 ಮಂದಿ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ತಮಿಳುನಾಡು 3, ಕೇರಳ, ಗುಜರಾತ್, ಉತ್ತರಪ್ರದೇಶ, ಮಧ್ಯಪ್ರದೇಶ ಮತ್ತು ದೆಹಲಿಯಿಂದ ತಲಾ ಒಬ್ಬರು ಬಂದಿದ್ದಾರೆ. ನೇಪಾಳ ಮತ್ತು ಯುಎಇಯಿಂದ ತಲಾ ಒಬ್ಬರು ಬಂದಿದ್ದಾರೆ. ಹೀಗೆ ಒಟ್ಟು 122 ಜನರಲ್ಲಿ 118 ಮಂದಿ ಸೋಂಕಿತರು ಹೊರ ರಾಜ್ಯ ಮತ್ತು ಹೊರ ದೇಶದಿಂದ ಬಂದವರೇ ಆಗಿರೋದು ಗಮನಾರ್ಹ. ಕೇವಲ 4 ಪ್ರಕರಣಗಳು ಮಾತ್ರ ಸ್ಥಳೀಯವಾಗಿ ಹರಡಿದ್ದಾಗಿದೆ.

ಇವತ್ತಿನ ಪ್ರಕರಣಗಳು: 

ಕಲಬುರಗಿ – 28

ಯಾದಗಿರಿ – 16

ಹಾಸನ – 15

ಬೀದರ್ – 12

ದಕ್ಷಿಣ ಕನ್ನಡ – 11

ಉಡುಪಿ – 9

ಉತ್ತರ ಕನ್ನಡ – 6

ಬೆಂಗಳೂರು ನಗರ  – 6

ರಾಯಚೂರು – 5

ಬೆಳಗಾವಿ – 4

ಚಿಕ್ಕಮಗಳೂರು – 3

ಬೆಂಗಳೂರು ಗ್ರಾಮಾಂತರ  – 2

ವಿಜಯಪುರ – 2

ಮಂಡ್ಯ – 1

ಬಳ್ಳಾರಿ – 1

ತುಮಕೂರು – 1

-masthmagaa.com

Contact Us for Advertisement

Leave a Reply