ಇಂಡೋನೇಷ್ಯಾ: ಹಿಜಾಬ್‌ ಹಾಕಿಲ್ಲ ಅಂತ ವಿದ್ಯಾರ್ಥಿನಿಯರ ತಲೆ ಬೋಳಿಸಿದ ಶಿಕ್ಷಕ

masthmagaa.com:

ಹಿಜಾಬ್‌ ಕುರಿತು ಇರಾನ್‌, ಅಫ್ಘಾನಿಸ್ತಾನ ಸೇರಿದಂತೆ ಹಲವು ದೇಶಗಳಲ್ಲಿ ವಿವಾದಗಳಿವೆ. ಇದೀಗ ಸರಿಯಾಗಿ ಹಿಜಾಬ್‌ ಧರಿಸಿಲ್ಲ ಅನ್ನೊ ಕಾರಣಕ್ಕೆ 14 ವಿದ್ಯಾರ್ಥಿನಿಯರ ತಲೆ ಬೋಳಿಸಿರುವ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ. 2021ರಲ್ಲಿ ಇಂಡೋನೇಷ್ಯಾದ ಶಾಲೆಗಳಲ್ಲಿ ಕಟ್ಟುನಿಟ್ಟಾದ ಡ್ರೆಸ್‌ ಕೋಡ್‌ ಅಂದ್ರೆ ಹುಜಾಬ್‌ ಸೇರಿದಂತೆ ಇತರ ನಿಯಮಗಳನ್ನ ಬ್ಯಾನ್‌ ಮಾಡಲಾಗಿದೆ. ಆದ್ರೆ ವಿದ್ಯಾರ್ಥಿನಿಯರು ತಮ್ಮ ತಲೆಯನ್ನ ಕವರ್‌ ಮಾಡಿಕೊ‍ಳ್ಳಲು ಸೂಚನೆ ನೀಡಲಾಗಿದೆ. ಇಂಡೋನೇಷ್ಯಾದ ಮಶ್ರಿಕಿ ಜಾವಾದ ಸರ್ಕಾರಿ ಜೂನಿಯರ್ ಹೈಸ್ಕೂಲ್​ನಲ್ಲಿ ಆಗಸ್ಟ್ 23 ರಂದು ಈ ಘಟನೆ ನಡೆದಿದೆ. ಈ ವಿದ್ಯಾರ್ಥಿನಿಯರು ಸರಿಯಾಗಿ ಸ್ಕಾರ್ಫ್‌ ಹಾಕದೇ ಇರೋದಕ್ಕೆ ಶಿಕ್ಷಕರೊಬ್ಬರು ಈ ರೀತಿ ಮಾಡಿದ್ದಾರೆ. ಇನ್ನು ವಿದ್ಯಾರ್ಥಿನಿಯರ ತಲೆ ಬೋಳಿಸಿದ ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ. ಜೊತೆಗೆ ಬಾಲಕಿಯರ ಪೋಷಕರಲ್ಲಿ ಶಾಲೆ ಪರವಾಗಿ ಕ್ಷಮೆ ಕೇಳಲಾಗಿದೆ ಅಂತ ಸ್ಕೂಲ್‌ನ ಹೆಡ್‌ ಮಾಸ್ಟರ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply