ಭಾರತೀಯ ವಿಮಾನ ನಿರಾಕರಿಸಿದ ಮಾಲ್ಡೀವ್ಸ್‌! ಪುಟ್ಟ ಬಾಲಕನ ಸಾವು!

masthmagaa.com:

ಭಾರತ ಈ ಹಿಂದೆ ಮಾಡಿರೊ ಸಹಾಯ ಮರೆತು, ನಮಗೆ ನಿಮ್ಮ ನೆರವು ಸ್ವಲ್ಪಾನೂ ಬೇಡ ಅನ್ನೋ ಹಾಗೆ ವರ್ತಿಸ್ತಿರೋ ಮಾಲ್ಡೀವ್ಸ್‌ ಸರ್ಕಾರ ಇದೀಗ ಒಂದು ದೊಡ್ಡ ಎಡವಟ್ಟು ಮಾಡಿದೆ. ಈ ಹಿಂದೆ ಭಾರತವೇ ಗಿಫ್ಟಾಗಿ ನೀಡಿದ್ದ Dornier ವಿಮಾನವನ್ನ ಬಳಸೋಕೆ ಅನುಮತಿ ನೀಡ್ದೇ ತಮ್ಮ ನಾಗರಿಕರದ್ದೇ ಜೀವವನ್ನ ಕಸಿದುಕೊಂಡಿದೆ. ಹೌದು, ಬ್ರೈನ್‌ ಟ್ಯೂಮರ್‌ನಿಂದ ಬಳಲ್ತಿದ್ದ ಮಾಲ್ಡೀವ್ಸ್‌ನ 14 ವರ್ಷದ ಬಾಲಕನೊಬ್ಬನಿಗೆ ಸ್ಟ್ರೋಕ್‌ ಉಂಟಾಗಿತ್ತು. ಆಗ ಬಾಲಕನನ್ನ ಮಾಲ್ಡೀವ್ಸ್‌ನ ರಾಜಧಾನಿ ಮಾಲೆಗೆ ಶಿಫ್ಟ್‌ ಮಾಡಲು Dornier ಬಳಸಿ ಏರ್‌ಲಿಫ್ಟ್‌ ಮಾಡಿ ಅಂತ ಆತನ ಮನೆಯವ್ರು ಕೇಳ್ಕೊಂಡಿದ್ರು. ಆದ್ರೆ ಅಧ್ಯಕ್ಷ ಮೊಹಮದ್‌ ಮುಯಿಝು ಮಾತ್ರ ಭಾರತ ಫ್ರೀಯಾಗಿ ನೀಡಿದ್ದ Dornier ವಿಮಾನ ಬಳಸೋಕೆ ಒಪ್ಪದೇ, ಕ್ರೂರಿಯಾಗ್ಬಿಟ್ರು. ಕ್ರಿಟಿಕಲ್‌ ಕಂಡೀಷನ್‌ನಲ್ಲಿದ್ದ ಬಾಲಕನನ್ನ 16 ಗಂಟೆಗಳ ಬಳಿಕ ಚಿಕಿತ್ಸೆಗಾಗಿ ಮಾಲೆಗೆ ಶಿಫ್ಟ್‌ ಮಾಡಲಾಗಿದೆ. ಆದ್ರೆ ಆ ಟೈಮ್‌ಗಾಗಲೇ ಲೇಟ್‌ ಆಗಿತ್ತು. ಮಾಲ್ಡೀವ್ಸ್‌ ಅಧ್ಯಕ್ಷನ ಹಠದಿಂದ ಸರಿಯಾದ ಟೈಮ್‌ಲ್ಲಿ ಪುಟ್ಟ ಬಾಲಕನಿಗೆ ಟ್ರೀಟ್‌ಮೆಂಟ್‌ ಸಿಗದೇ ಪ್ರಾಣ ಕಳೆದ್ಕೊಂಡಿದ್ದಾನೆ. ಅಂದ್ಹಾಗೆ ಮಾಲ್ಡೀವ್ಸ್‌ನಂತಹ ದ್ವೀಪ ರಾಷ್ಟ್ರದಲ್ಲಿ ಇಂತಹ ಎಮರ್ಜೆನ್ಸಿ ಹೆಲ್ತ್‌ ಕಂಡೀಷನ್‌ ಎದುರಾದಾಗ, ಪೇಶಂಟ್‌ನ್ನ ಏರ್‌ಲಿಫ್ಟ್‌ ಮಾಡದೇ ಬೇರೆ ದಾರಿ ಇಲ್ಲ. ಇನ್ನು ಇದೇ ಕಾರಣಕ್ಕಾಗಿ ಭಾರತ Dornier ವಿಮಾನವನ್ನ ಮಾಲ್ಡೀವ್ಸ್‌ಗೆ ಉಡುಗೊರೆಯಾಗಿ ನೀಡಿತ್ತು.

-masthmagaa.com

Contact Us for Advertisement

Leave a Reply