ಕರ್ನಾಟಕದ 5 ಜನ ಪೊಲೀಸರಿಗೆ ಒಲಿದ ಕೇಂದ್ರ ಗೃಹಸಚಿವರ ಪದಕ!

masthmagaa.com:

2023ನೇ ಸಾಲಿನ ʻತನಿಖೆಯಲ್ಲಿ ಶ್ರೇಷ್ಠತೆಗಾಗಿ ಕೇಂದ್ರ ಗೃಹ ಸಚಿವರ ಪದಕʼಕ್ಕೆ 140 ಪೊಲೀಸ್ ಅಧಿಕಾರಿಗಳು ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಗಳನ್ನ ಸ್ವೀಕರಿಸುವ ಸಿಬ್ಬಂದಿಗಳಲ್ಲಿ 15 CBI, 12 NAI, ಉತ್ತರ ಪ್ರದೇಶದಿಂದ 10, ಕೇರಳ ಮತ್ತು ರಾಜಸ್ಥಾನದಿಂದ 9, ತಮಿಳುನಾಡಿನಿಂದ 8, ಮಧ್ಯಪ್ರದೇಶದಿಂದ 7, ಗುಜರಾತ್​​ನಿಂದ 6 ಮತ್ತು ಕರ್ನಾಟಕದಿಂದ 5 ಮಂದಿ ಇದ್ದಾರೆ. ಉಳಿದ ಅಧಿಕಾರಿಗಳು ಇತರ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಸಂಸ್ಥೆಗಳಲ್ಲಿದ್ದವರು. ಅಧಿಕೃತ ಹೇಳಿಕೆಯ ಪ್ರಕಾರ ಪ್ರಶಸ್ತಿ ಪುರಸ್ಕೃತರಲ್ಲಿ 22 ಮಹಿಳಾ ಅಧಿಕಾರಿಗಳು ಇದ್ದಾರೆ.

-masthmagaa.com

Contact Us for Advertisement

Leave a Reply