ಅಂಡಮಾನ್‌: 142 ಶಂಕಿತ ರೋಹಿಂಗ್ಯಾ ನಿರಾಶ್ರಿತರಿದ್ದ ದೋಣಿಗೆ ತಡೆ!

masthmagaa.com:

ಶಂಕಿತ ರೋಹಿಂಗ್ಯಾ ನಿರಾಶ್ರಿತರನ್ನ ಹೊತ್ತೊಯ್ತಿದ್ದ ದೋಣಿಯನ್ನ ಕರಾವಳಿ ಭದ್ರತಾ ಏಜೆನ್ಸಿಗಳು ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪದಲ್ಲಿ ತಡೆದಿದ್ದಾರೆ. ಈ ದೋಣಿಯಲ್ಲಿ ಮಹಿಳೆಯರು ಮತ್ತು ಮಕ್ಕಳನ್ನ ಸೇರಿ ಕನಿಷ್ಠ 142 ಮಂದಿ ಶಂಕಿತ ರೋಹಿಂಗ್ಯಾ ನಿರಾಶ್ರಿತರಿದ್ರು ಅಂತ ತಿಳಿದು ಬಂದಿದೆ. ದೋಣಿ 14-15 ದಿನಗಳ ಹಿಂದೆ ಬಾಂಗ್ಲಾದೇಶದಿಂದ ಹೊರಟು ಇಂಡೋನೇಷ್ಯಾ ಕಡೆ ಪ್ರಯಾಣ ಬೆಳೆಸ್ತಿದ್ದ ವೇಳೆ, ಇವ್ರನ್ನ ಶಹೀದ್‌ ದ್ವೀಪದ ಹತ್ರ ತಡೆಯಲಾಗಿದೆ. ಹೀಗಂತ ಅಲ್ಲಿನ ಪೊಲೀಸ್‌ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ. ಅಂದ್ಹಾಗೆ ಶಹೀದ್‌ ದ್ವೀಪದ ಹತ್ರ ಶಂಕಿತ ದೋಣಿಯ ಮೂವ್‌ಮೆಂಟ್‌ ಬಗ್ಗೆ ಅಲ್ಲಿನ ಲೋಕಲ್‌ ಗುಪ್ತಚರ ಇಲಾಖೆಯಿಂದ ಪೋರ್ಟ್‌ ಬ್ಲೇರ್‌ ಪೊಲೀಸ್‌ ಕಂಟ್ರೋಲ್‌ ರೂಮ್‌ಗೆ ಕರೆ ಬಂದಿತ್ತು.

-masthmagaa.com

Contact Us for Advertisement

Leave a Reply