ಶ್ರೀಲಂಕಾ ನೌಕಾಪಡೆಯಿಂದ ಭಾರತದ 15 ಜನ ಮೀನುಗಾರರ ಬಂಧನ!

masthmagaa.com:

ಭಾರತದ 15 ಮಂದಿ ಮೀನುಗಾರರನ್ನ ಶ್ರೀಲಂಕಾದ ನೌಕಾಪಡೆ ಬಂಧಿಸಿದೆ. ತಲೈಮನ್ನಾರ್‌ ಸಾಗರ ತೀರದ ಬಳಿ ಬಂಧಿಸಿರೋದಾಗಿ ಲಂಕಾ ಪಡೆ ಹೇಳಿದೆ. ಇವ್ರು ಲಂಕಾಗೆ ಸೇರಿದ ಪ್ರದೇಶದಲ್ಲಿ ಅಕ್ರಮವಾಗಿ ಮೀನುಗಾರಿಕೆ ಮಾಡ್ತಿದ್ರು ಅಂತ ಆರೋಪ ಮಾಡಲಾಗಿದೆ. ಇನ್ನು ತಲೈಮನ್ನಾರ್‌ ನೌಕಾಪಡೆಯ ವಶದಲ್ಲಿರೋ ಮೀನುಗಾರರನ್ನ ಫಿಶರೀಸ್‌ ಇನ್ಸ್‌ಪೆಕ್ಟರ್‌ಗೆ ಹಸ್ತಾಂತರ ಮಾಡಲಾಗುತ್ತೆ ಅಂತ ಲಂಕಾ ಹೇಳಿದೆ. ಉಭಯ ದೇಶಗಳ ನಡುವೆ ಹಲವು ಉನ್ನತ ಮಟ್ಟದ ಮಾತುಕತೆಗಳು ನಡೆದಿದ್ರೂ ಸಹ ಇಬ್ಬರ ಮಧ್ಯೆ ಮೀನುಗಾರಿಕೆಗೆ ಸಮಸ್ಯೆಯ ಮಾತ್ರ ನಿಲ್ಲುತ್ತಿಲ್ಲ.ಇತ್ತ ಮೀನುಗಾರರ ಮೇಲೆ ಮಾನವೀಯ ದೃಷ್ಠಿಯನ್ನ ಲಂಕಾ ಪಡೆ ಇಟ್ಟುಕೊಳ್ಳಬೇಕು ಅಂತ ಭಾರತದ ನೌಕಾಪಡೆ ಲಂಕಾಗೆ ಹೇಳಿದೆ. ನವೆಂಬರ್‌ 4 ರಂದು ಲಂಕಾದ ಹಡಗಿನಲ್ಲಿ ನಡೆದಿದ್ದ ಭಾರತೀಯ ಸಮುದ್ರ ಗಡಿ ರೇಖೆ ಸಭೆಯಲ್ಲಿ ಇದನ್ನ ಚರ್ಚಿಸಲಾಗಿತ್ತು. ಅದ್ರಂತೆ ಮಾನವೀಯ ಧೋರಣೆಯನ್ನ ಅನುಸರಿಸಬೇಕು ಅಂತ ಇಂಡಿಯನ್‌ ನೇವಿ ಹೇಳಿದೆ

-masthmagaa.com

Contact Us for Advertisement

Leave a Reply