ಇದು ಕೊರೋನಾಗಿಂತಲೂ ಅತಿದೊಡ್ಡ ಮಹಾಮಾರಿ!

masthmagaa.com:

ಪ್ರಪಂಚದ 15.5 ಕೋಟಿ ಜನರಿಗೆ 2 ಹೊತ್ತಿನ ಊಟ ಕೂಡ ಸರಿಯಾಗಿ ಸಿಗ್ತಾ ಇಲ್ಲ ಅಂತ ವಿಶ್ವಸಂಸ್ಥೆಯ ವರದಿಯಲ್ಲಿ ಬಹಿರಂಗವಾಗಿದೆ. ಕೊರೋನಾಗೆ ಅಷ್ಟು ಜನ ಬಲಿಯಾಗ್ತಿದ್ದಾರೆ. ಇಷ್ಟು ಜನ ಬಲಿಯಾಗ್ತಿದ್ದಾರೆ ಅಂತ ದಿನಾಲೂ ಸುದ್ದಿಯಾಗ್ತಿದೆ. ಆದ್ರೆ 1.33 ಲಕ್ಷ ಜನ ಬರೀ ಹಸಿವಿನಿಂದಲೇ ಸಾವಿಗೆ ತುಂಬಾ ಹತ್ತಿರದಲ್ಲಿದ್ದಾರೆ ಅಂತ ವಿಶ್ವಸಂಸ್ಥೆಯ ಈ ವರದಿ ತಿಳಿಸಿದೆ. 16 ಸಂಘಟನೆಗಳು 55 ದೇಶಗಳಲ್ಲಿ ಸಂಶೋಧನೆ ನಡೆಸಿ ಈ ವರದಿಯನ್ನು ಸಿದ್ಧಪಡಿಸಿವೆ. ಕಳೆದ ವರ್ಷ ನಡೆಸಿರೋ ಅಧ್ಯಯನದ ವರದಿ ಇದಾಗಿದ್ದು, ಈ ವರ್ಷ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ ಅಂತ ಎಚ್ಚರಿಸಿದೆ. ಇವರ ಪೈಕಿ ಮೂರನೇ ಎರಡರಷ್ಟು ಜನ ಕಾಂಗೋ, ಯೆಮನ್, ಅಫ್ಘಾನಿಸ್ಥಾನ, ಸಿರಿಯಾ, ಸುಡಾನ್​​, ಉತ್ತರ ನೈಜೀರಿಯಾ, ಇಥಿಯೋಪಿಯಾ, ದಕ್ಷಿಣ ಸೂಡಾನ್, ಜಿಂಬಾಬ್ವೆ ಮತ್ತು ಹೈತಿ ರಾಷ್ಟ್ರದವರೇ ಆಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ವಿಶ್ವಸಂಸ್ಥೆ ಮುಖ್ಯಸ್ಥ ಅಂಟಾನಿಯೋ ಗುಟೇರಸ್​​, 21ನೇ ಶತಮಾನದಲ್ಲಿ ಹಸಿವು ಮತ್ತು ಬರಕ್ಕೆ ಯಾವುದೇ ಜಾಗ ಇಲ್ಲ.. ಇದನ್ನ ತಡೆಯಬೇಕು ಅಂತ ಹೇಳಿದ್ಧಾರೆ. ಇನ್ನು ವಿಶ್ವ ಆಹಾರ ಕಾರ್ಯಕ್ರಮದ ಮುಖ್ಯ ಆರ್ಥಿಕ ತಜ್ಞ ಆರಿಫ್ ಹುಸೇನ್ ಪ್ರಕಾರ ಆಹಾರ ಕೊರತೆಯ ಪ್ರಮುಖ ಕಾರಣ ಸಂಘರ್ಷ.. ಹೀಗಾಗಿ ವಿವಿಧ ದೇಶಗಳಲ್ಲಿ ನಡೆಯುತ್ತಿರುವ ಅಂತರ್ಯುದ್ಧ ಸೇರಿದಂತೆ ಇತರೆ ಸಂಘರ್ಷ ನಿರ್ಮೂಲನೆಗೆ ದಾರಿ ಹುಡುಕುವವರೆಗೆ ಈ ದೇಶಗಳ ಜನರಿಗೆ ಮಾನವೀಯ ಸಹಾಯದ ಅನಿವಾರ್ಯತೆ ಇದೆ ಅಂತ ಕೂಡ ವರದಿಯಲ್ಲಿ ಹೇಳಲಾಗಿದೆ.

-masthmagaa.com

Contact Us for Advertisement

Leave a Reply