ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದ ಮಂಗಳಮುಖಿ ನಿಶಾ!

masthmagaa.com:

ಕೇರಳದ ಶಬರಿಮಲೆಯ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಮಂಗಳಮುಖಿಯೊಬ್ರು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿರೋದು ವರದಿಯಾಗಿದೆ. ಆಜನ್ಮಬ್ರಹ್ಮಚಾರಿ ಅಂತ ಕರೆಯಲಾಗೋ ಅಯ್ಯಪ್ಪನ ಈ ಪುಣ್ಯಕ್ಷೇತ್ರಕ್ಕೆ ಸಾಮಾನ್ಯವಾಗಿ 10 ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ಎಂಟ್ರಿ ಇಲ್ಲ. ಈ ಸಂಪ್ರದಾಯವನ್ನ ಚಾಚೂ ತಪ್ಪದೇ ಶತಮಾನಗಳಿಂದ ಪಾಲಿಸ್ಕೊಂಡು ಬರಲಾಗ್ತಿದೆ. ಆದ್ರೆ ಇದೀಗ ಮೊದಲ ಬಾರಿಗೆ ತೃತೀಯಲಿಂಗಿ ಜೋಗಿನಿ ನಿಶಾ ಡಿಸೆಂಬರ್‌ 31 ರಂದು ಶಬರಿಮಲೆಗೆ ಬಂದು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ. ಅಂದ್ಹಾಗೆ ಅವ್ರು ಟ್ರಾನ್ಸ್‌ಜೆಂಡರ್‌ ಅನ್ನೋ ಗುರುತಿನ ಪತ್ರದ ಆಧಾರದ ಮೇಲೆ ಕೇರಳ ಸರ್ಕಾರ ಅವ್ರಿಗೆ ಭೇಟಿ ನೀಡೋಕೆ ಅವಕಾಶ ನೀಡಿತ್ತು.

-masthmagaa.com

Contact Us for Advertisement

Leave a Reply