ಅಫ್ಘಾನಿಸ್ತಾನ್:‌ ರಷ್ಯಾದ ರಾಯಭಾರ ಕಚೇರಿ ಬಳಿ ಸ್ಪೋಟ, ಇಬ್ಬರು ರಷ್ಯಾ ರಾಯಭಾರಿಗಳು ಸಾವು

masthmagaa.com:

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಮತ್ತೊಂದು ಸ್ಪೋಟ ಸಂಭವಿಸಿದೆ. ದೇಶದ ರಾಯಭಾರ ಕಚೇರಿಯ ಹೊರಗೆ ನಿನ್ನೆ ನಡೆದ ಸ್ಪೋಟದಲ್ಲಿ ಇಬ್ಬರು ರಷ್ಯಾ ರಾಯಭಾರಿಗಳನ್ನ ಸೇರಿದಂತೆ 20 ಜನರು ಸಾವನ್ನಪ್ಪಿದ್ದಾರೆ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಕಾಬೂಲ್‌ನ ದಾರುಲ್‌ಮನ್‌ ರಸ್ತೆಯಲ್ಲಿರೊ ರಷ್ಯಾದ ರಾಯಭಾರ ಕಚೇರಿಯ ಎಂಟ್ರನ್ಸ್‌ ಬಳಿ ಆತ್ಮಾಹುತಿ ದಾಳಿಕೋರನೊಬ್ಬ ಸ್ಪೋಟಕಗಳನ್ನ ಸ್ಪೋಟಿಸಿದ್ದಾನೆ ಅಂತ ಕಾಬೂಲ್‌ ಪೊಲೀಸರು ತಿಳಿಸಿದ್ದಾರೆ. ಆದ್ರೆ ಈ ದಾಳಿಕೋರ ತನ್ನ ಟಾರ್ಗೆಟ್‌ನ್ನ ತಲುಪೊ ಮೊದ್ಲೆ ಗಾರ್ಡ್‌ಗಳು ಈತನನ್ನ ಗುರುತಿಸಿ ಹತ್ಯೆ ಮಾಡಿದ್ದಾರೆ ಅಂತ ವರದಿಯಾಗಿದೆ. ಇನ್ನೊಂದ್‌ ಕಡೆ ನಿನ್ನೆ ರಾತ್ರಿ ಸಂಭವಿಸಿದ ಭೂಕಂಪನದಲ್ಲಿ ಕನಿಷ್ಟ 6 ಜನ ಮೃತಪಟ್ಟಿದ್ದು, ಇತರ 9 ಜನರು ಗಾಯಗೊಂಡಿದ್ದಾರೆ ಅಂತ ವರದಿಯಾಗಿದೆ. 5.6 ತೀವ್ರತೆಯ ಈ ಭೂಕಂಪನ ಪೂರ್ವ ಅಫ್ಘಾನ್‌ ಪ್ರದೇಶದಲ್ಲಿ ಉಂಟಾಗಿದೆ ಅಂತ ಹೇಳಲಾಗಿದೆ. ಅಂದ್ಹಾಗೆ ಜೂನ್‌ 22 ರಂದು ಸಂಭವಿಸಿದ್ದ ದೇಶದ ಅತಿ ಭಯಾನಕ ಭೂಕಂಪನ 1 ಸಾವಿರಕ್ಕಿಂತ ಅಧಿಕ ಜನರನ್ನ ಬಲಿ ತೆಗೆದುಕೊಂಡಿತ್ತು.

-masthmagaa.com

Contact Us for Advertisement

Leave a Reply