ಹರ್ದಿಪ್‌ ನಿಜ್ಜರ್‌ ಹತ್ಯೆಗೆ ಟ್ವಿಸ್ಟ್ : ಸದ್ಯದಲ್ಲೇ ಶಂಕಿತರ ಬಂಧನ!

masthmagaa.com:

ಸಿಖ್‌ ಪ್ರತ್ಯೇಕತಾವಾದಿ ಹರ್ದಿಪ್‌ ನಿಜ್ಜರ್‌ ಹತ್ಯೆಗೆ ಸಂಬಂಧಿಸಿದಂತೆ ಇಬ್ಬರನ್ನ ಕೆನಡಾ ಪೋಲಿಸರು ವಾರದಲ್ಲೇ ಬಂಧಿಸಲಿದ್ದಾರೆ ಅಂತ ವರದಿಯಾಗಿದೆ. ನಿಜ್ಜರ್‌ನನ್ನ ಬ್ರಿಟಿಷ್‌ ಕೊಲಂಬಿಯಾದಲ್ಲಿ ಶೂಟ್‌ ಮಾಡಿದ್ದ ಶಂಕಿತ ಹಂತಕರು ಈ ತಿಂಗಳಿಂದ ಪೋಲಿಸರ ಕಣ್ಗಾವಲಿನಲ್ಲಿ ಕೆನಡಾದಲ್ಲೇ ಇದ್ದಾರೆ ಅಂತ ಕೆನಡಾದ ಗ್ಲೋಬ್‌ & ಮೇಲ್‌ ಪತ್ರಿಕೆ ತನ್ನ ವರದಿಯಲ್ಲಿ ತಿಳಿಸಿದೆ. ಅಂದ್ರೆ ಪದೇ ಪದೇ ಭಾರತದತ್ತ ಬೊಟ್ಟು ಮಾಡಿ ತೋರ್ಸತಿದ್ದ ಕೆನಡಾ ಇದೀಗ ತನ್ನ ರಾಷ್ಟ್ರದಲ್ಲೇ ಹಂತಕರನ್ನ ಇರಿಸಿಕೊಂಡಂತೆ ಗೋಚರಿಸ್ತಿದೆ. ಆದ್ರೆ ಕೆನಡಾದ ಗ್ಲೋಬ್‌ & ಮೇಲ್‌ ಪತ್ರಿಕೆ ಮಾತ್ರ ಪೋಲಿಸರು ಈ ಕೇಸ್‌ನಲ್ಲಿ ಭಾರತದ ಪಾತ್ರದ ಕುರಿತು ಸ್ಪಷ್ಟನೆ ಕೊಡಲಿದ್ದಾರೆ ಅಂತ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ವರದಿಯಲ್ಲಿ ಉಲ್ಲೇಖಿಸಿದೆ. ಹಂತಕರು ಕೆನಡಾದ್ವರೋ, ಅಥ್ವಾ ಬೇರೆ ದೇಶದವ್ರೋ ಅನ್ನೋ ಬಗ್ಗೆ ಸ್ಪಷ್ಟವಾಗಿ ತಿಳಿಸಿಲ್ಲ.

-masthmagaa.com

Contact Us for Advertisement

Leave a Reply