ಇನ್ಮುಂದೆ ಮನೆಯಲ್ಲೇ ಕೊರೋನಾ ಟೆಸ್ಟ್ ಮಾಡಬಹುದು!

masthmagaa.com:

ಇನ್ನು ಮುಂದೆ ಕೊರೋನಾ ಟೆಸ್ಟ್‌ ಮಾಡ್ಕೊಳ್ಳಕ್ಕೆ ಆಸ್ಪತ್ರೆ, ಲ್ಯಾಬ್ ಅಲಿಬೇಕಾಗಿಲ್ಲ. ಯಾಕಂದ್ರೆ ಇನ್ನು ಮುಂದೆ ನಾವೆ ಮನೆಯಲ್ಲಿ ಕೊರೋನಾ ಟೆಸ್ಟ್‌ ಮಾಡ್ಕೊಳ್ಳಕ್ಕೆ ಕೋವಿ ಸೆಲ್ಫ್‌ ಅನ್ನೋ ಕೊರೋನಾ ಟೆಸ್ಟಿಂಗ್‌ ಕಿಟ್‌ ಬಂದಿದೆ. ಇದಕ್ಕೆ ಐಸಿಎಮ್‌ಆರ್‌ ಒಪ್ಪಿಗೆನೂ ಕೊಟ್ಟಿದೆ. ಈ ಕಿಟ್‌ ಅನ್ನ ಪುಣೆ ಮೂಲದ ಮೈ ಲ್ಯಾಬ್‌ ಡಿಸ್ಕವರಿ ಸೊಲ್ಯೂಷನ್‌ ಸಿದ್ದ ಪಡಿಸಿದ್ದು, ಲ್ಯಾಬ್‌ಗಳ ಮೇಲಿನ ಹೊರೆ ಕಡಿಮೆ ಮಾಡಲು ಸಹಕಾರಿಯಾಗಿದೆ. 250 ರುಪಾಯಿಯ ಈ ಕಿಟ್​​​ನಲ್ಲಿ ಟೆಸ್ಟ್ ಮಾಡೋಕೆ ಜಸ್ಟ್ ಮೂಗಿನ ಸ್ವ್ಯಾಬ್ ಇದ್ರೆ ಸಾಕಾಗುತ್ತೆ. 2 ನಿಮಿಷದಲ್ಲಿ ನಡೆಯೋ ಈ ಟೆಸ್ಟ್ ರಿಸಲ್ಟ್ ಬರೋಕೆ 15 ನಿಮಿಷ ಬೇಕಾಗುತ್ತೆ. ಇನ್ನೊಂದು ವಾರದಲ್ಲಿ 7 ಲಕ್ಷಕ್ಕೂ ಹೆಚ್ಚು ಮೆಡಿಕಲ್ ಮತ್ತು ಆನ್ಲೈನ್‌ನಲ್ಲೂ ಈ ಕಿಟ್ ಸಿಗುತ್ತೆ ಅಂತ ಮೈ ಲ್ಯಾಬ್‌ ಡಿಸ್ಕವರಿ ಸೊಲ್ಯೂಷನ್‌ ತಿಳಿಸಿದೆ.

-masthmagaa.com

Contact Us for Advertisement

Leave a Reply