ಜಮ್ಮು ಕಾಶ್ಮೀರದಲ್ಲಿ ಇಬ್ಬರು ಉಗ್ರರ ಬೇಟೆಯಾಡಿದ ಯೋಧರು

masthmagaa.com:
ನಿನ್ನೆ ರಾತ್ರಿ ಜಮ್ಮು ಕಾಶ್ಮೀರದ ಕುಲ್ಗಾಂನ ರೆಡ್ವಾನಿ ಪ್ರದೇಶದಲ್ಲಿ ಯೋಧರು ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಈ ಭಾಗದಲ್ಲಿ ಉಗ್ರರು ಅಡಗಿದ್ದಾರೆ ಅಂತ ಮಾಹಿತಿ ಲಭ್ಯವಾಗಿತ್ತು. ಹೀಗಾಗಿ ಪೊಲೀಸರು ಮತ್ತು ಯೋಧರು ಸೇರಿ ಜಂಟಿ ಕಾರ್ಯಾಚರಣೆ ನಡೆಸಿ, ಉಗ್ರರನ್ನು ಬಗ್ಗು ಬಡಿದಿದ್ದಾರೆ. ಮೃತರಲ್ಲಿ ಓರ್ವ ಎಲ್​ಇಟಿಯ ಆಮಿರ್ ಬಶೀರ್ ಧರ್ ಮತ್ತೋರ್ವ ದಿ ರೆಸಿಸ್ಟೆನ್ಸ್​ ಫ್ರಂಟ್​​ನ ಆದಿಲ್ ಯೂಸೂಫ್ ಶಾನ್ ಅಂತ ಗುರುತಿಸಲಾಗಿದೆ.
-masthmagaa.com

Contact Us for Advertisement

Leave a Reply