ಬಿಹಾರ: ನಕಲಿ ಮದ್ಯ ಸೇವನೆಯಿಂದ 20 ಜನರ ಸಾವು

masthmagaa.com:

ನಕಲಿ ಮದ್ಯ ಸೇವಿಸಿ 20 ಜನ ಮೃತಪಟ್ಟ 25 ಜನರು ಆಸ್ಪತ್ರೆಗೆ ದಾಖಲಾಗಿರೊ ಘಟನೆ ಬಿಹಾರದ ಮೋತಿಹಾರ್‌ನಲ್ಲಿ ನಡೆದಿದೆ. ಇತ್ತೀಚೆಗಷ್ಟೆ ನಕಲಿ ಮದ್ಯದಿಂದ 40ಕ್ಕೂ ಹೆಚ್ಚು ಜನರು ಬಿಹಾರದಲ್ಲಿ ಮೃತಪಟ್ಟಿದ್ದು, ಅಲ್ಲಿನ ವಿಧಾನಸಭೆಯಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿತ್ತು. ಮದ್ಯ ಕುಡಿದವರು ಸಾಯ್ತಾರೆ ಅದಕ್ಕೆ ಉದಾಹರಣೆ ನಮ್ಮ ಕಣ್ಣಮುಂದೆ ಇದೆ ಅಂತ ಬಿಹಾರ ಸಿಎಂ ನಿತೀಶ್‌ ಕುಮಾರ್‌ ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು. ಅಂದ್ಹಾಗೆ 2016ರಲ್ಲಿ ಮದ್ಯ ಮಾರಾಟ ಹಾಗೂ ಸೇವನೆಯನ್ನ ಬಿಹಾರದಲ್ಲಿ ನಿಷೇಧಿಸಲಾಗಿದೆ.

-masthmagaa.com

Contact Us for Advertisement

Leave a Reply