‘2018’: ಕೇರಳ ಸ್ಟೋರಿ ಕಲೆಕ್ಷನ್ ಅನ್ನೂ ಮೀರಿಸಿದ ಅಪ್ಪಟ ಮಲಯಾಳಂ ಸಿನಿಮಾ!

masthmagaa.com:

“2018” ಸದ್ಯ ಏಲ್ಲಾ ಭಾಷೆಗಳಲ್ಲೂ ಸದ್ದು ಮಾಡ್ತಾ ಇರುವ ಸಿನಿಮಾ. 2018ರಲ್ಲಿ ಕೇರಳದಲ್ಲಿ ಉಂಟಾದ ಪ್ರವಾಹವನ್ನ ಆಧರಿಸಿ ಈ ಚಿತ್ರವನ್ನ ಚಿತ್ರಿಸಿಲಾಗಿದೆ. ಪ್ರವಾಹ ಆದಾಗ ಅಲ್ಲಿನ ಜನರ ಪರಿಸ್ಥಿತಿ, ಆಸ್ತಿ ನಾಶ ಆದ ಬಗ್ಗೆ, ಆ ಟೈಮ್‌ನಲ್ಲಿ ಎಲ್ಲರೂ ಹೇಗೆ ನಡೆದುಕೊಂಡ್ರು ಅನ್ನೋ ಬಗ್ಗೆ ಈ ಸಿನಿಮಾ ವಿವರವಾಗಿ ತಿಳಿಸತ್ತೆ. 400ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ, ಇನ್ನೂ ಎಷ್ಟೋ ಜನ ನಾಪತ್ತೆ ಆಗಿದ್ದಾರೆ. ಇಡೀ ಕೇರಳವೇ ಆಸ್ತಿ-ಪಾಸ್ತಿ ಕಳೆದುಕೊಂಡಿತ್ತು. ಇದೆಲ್ಲ ವಿಷಯಗಳನ್ನ ಇಟ್ಟುಕೊಂಡು ಈ ಸಿನಿಮಾವನ್ನ ನಿರ್ಮಾಣ ಮಾಡಲಾಗಿದೆ. ಮಲಯಾಳಂ ಭಾಷೆಯ ಈ ಚಿತ್ರ ತೆಲುಗು, ಕನ್ನಡ, ಹಿಂದಿ, ತಮಿಳು ಭಾಷೆಗಳಿಗೆ ಡಬ್‌ ಮಾಡಿ ರಿಲೀಸ್‌ ಮಾಡಲಾಗಿತ್ತು. ಸದ್ಯ ಈ ಚಿತ್ರದ ಬಗ್ಗೆ ಕಿಚ್ಚ ಸುದೀಪ್‌ ಅವರು ಟ್ವೀಟ್‌ ಮಾಡಿ ಚಿತ್ರತಂಡಕ್ಕೆ ಶುಭಾಷಯ ತಿಳಿಸಿದ್ದಾರೆ.

‘ಕೇರಳದಲ್ಲಿ 2018ರಲ್ಲಿ ಪ್ರವಾಹ ಉಂಟಾದಾಗ ಮಾನವೀಯತೆ ಗೆದ್ದಿತ್ತು. ಈ ಧೈರ್ಯಶಾಲಿ ನೈಜ ಕಥೆಯು ಬೆಳ್ಳಿತೆರೆಯಲ್ಲಿ ಅದ್ಭುತವಾಗಿ ಮೂಡಿಬಂದಿದ್ದು, ಕೇರಳ ಚಿತ್ರೋದ್ಯಮದ ಇತಿಹಾಸದಲ್ಲಿ ಅತಿದೊಡ್ಡ ಬ್ಲಾಕ್‌ ಬಸ್ಟರ್ ಆಗಿದೆ. ‘2018’ ಸಿನಿಮಾ ಕನ್ನಡಿಗರ ಹೃದಯವನ್ನೂ ಗೆಲ್ಲುತ್ತಿದೆ. ಅಭಿನಂದನೆಗಳು’ ಎಂದು ಸುದೀಪ್​ ಅವರು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. ಇನ್ನೂ ಸುದೀಪ್‌ ಅವರ ಪೋಸ್ಟ್‌ಗೆ ಸಾಲು ಸಾಲು ಅಭಿಮಾನಿಗಳು ಕಾಮೆಂಟ್‌ ಮಾಡ್ತಾ ಇದಾರೆ.

ಈವರೆಗೂ 160 ಕೋಟಿ ರೂಪಾಯಿಗಳನ್ನು ಗಳಿಸುವ ಮೂಲಕ ಮಲಯಾಳಂ ಚಿತ್ರರಂಗದ ಅತಿ ದೊಡ್ಡ ಬ್ಲಾಕ್​ ಬಸ್ಟರ್​ ಸಿನಿಮಾ ಎಂಬ ಖ್ಯಾತಿಗೆ ‘2018’ ಒಳಗಾಗಿದೆ. ಟೊವಿನೋ ಥಾಮಸ್​ ಜೊತೆ ಆಸಿಫ್​ ಅಲಿ, ಅಪರ್ಣಾ ಬಾಲಮುರಳಿ, ವಿನೀತ್​ ಶ್ರೀನಿವಾಸನ್​, ಕಲೈಯರಸನ್​, ಸುದೇಶ್​, ಅಜು ವರ್ಗೀಸ್​, ತನ್ವಿ ರಾಮ್​, ಗೌತಮಿ ನಾಯರ್​ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಜೂಡ್​ ಆಂಥೊನಿ ಜೋಸೆಫ್​ ಅವರು ನಿರ್ದೇಶನ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply