ರಾಜ್ಯದ ಅಂತಿಮ ಮತದಾರರ ಲಿಸ್ಟ್‌ ಪ್ರಕಟ! ಮಹಿಳಾ ಮತದಾರರಲ್ಲಿ ಏರಿಕೆ!

masthmagaa.com:

ಕರ್ನಾಟಕ ಚುನಾವಣಾ ಆಯೋಗ ಇದೀಗ ರಾಜ್ಯದ 224 ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನ ರಿಲೀಸ್‌ ಮಾಡಿದೆ. ಇದ್ರ ಪ್ರಕಾರ ರಾಜ್ಯದಲ್ಲಿ ಒಟ್ಟು 5,37,85,875 ಮತದಾರರು ಇದ್ದಾರೆ ಎನ್ನಲಾಗಿದೆ. ಒಟ್ಟು ಮತದಾರರ ಪೈಕಿ 2,69,33,750 ಪುರುಷರಿದ್ರೆ, 2,68,47,145 ಮಹಿಳೆಯರಿದ್ದಾರೆ. ಇನ್ನು ಕರಡು ಪಟ್ಟಿಗೆ ಹೋಲಿಸಿದ್ರೆ ಈ ಬಾರಿ ಮಹಿಳಾ ವೋಟರ್ಸ್‌ ಸಂಖ್ಯೆ 2,77,717 ರಷ್ಟು ಹೆಚ್ಚಾಗಿದೆ. 10,34,018 ರಷ್ಟು ಯುವ ಮತದಾರರಿದ್ದಾರೆ. ಈ ಪೈಕಿ 3,88,527 ರಷ್ಟು ಯುವಕರು ಹೊಸತಾಗಿ ರಿಜಿಸ್ಟರ್‌ ಮಾಡಿಕೊಂಡಿದ್ದಾರೆ. ಇನ್ನು ಅನಿವಾಸಿ ಭಾರತೀಯ ಮತದಾರರ ಸಂಖ್ಯೆ 3,165 ಇದೆ. 12,71,862 ರಷ್ಟು 80 ವರ್ಷ ಮೇಲ್ಪಟ್ಟವ್ರು ಇದ್ದಾರೆ. ಇನ್ನು ಶತಾಯುಷಿಗಳ ಸಂಖ್ಯೆ 17,937 ಇದೆ ಅಂತ ಮಾಹಿತಿ ಸಿಕ್ಕಿದೆ.

-masthmagaa.com

Contact Us for Advertisement

Leave a Reply