ಹೆಲ್ತ್​ ಬುಲೆಟಿನ್: ರಾಜ್ಯದಲ್ಲಿ ಇಬ್ಬರು ಬಲಿ.. 239 ಜನರಿಗೆ ಸೋಂಕು

masthmagaa.com:

ರಾಜ್ಯದಲ್ಲಿ ಇವತ್ತು 239 ಜನರಿಗೆ ಚೀನಾ ಸೋಂಕು ತಾಗಿದೆ. ಇದರಲ್ಲಿ 183 ಜನ ಮಹಾರಾಷ್ಟ್ರ ಸೇರಿದಂತೆ ಹೊರ ರಾಜ್ಯದಿಂದ ಬಂದವರಾಗಿದ್ದಾರೆ. 9 ಮಂದಿ ವಿದೇಶದಿಂದ ಬಂದವರಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 5,452 ಆಗಿದೆ. ಬೆಂಗಳೂರು ನಗರದಲ್ಲಿ 61 ವರ್ಷದ ವೃದ್ಧೆ ಮತ್ತು 57 ವರ್ಷದ ಪುರುಷ ಮೃತಪಟ್ಟಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆ 61 ಆಗಿದೆ.

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 143 ಜನ ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 2,132 ಆಗಿದೆ. 3,257 ಜನ ಇನ್ನೂ ಕೂಡ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ 10 ಜನರ ಸ್ಥಿತಿ ಗಂಭೀರವಾಗಿದೆ.

ಇವತ್ತಿನ ಪ್ರಕರಣಗಳು:

ಕಲಬುರಗಿ – 39

ಯಾದಗಿರಿ – 39

ಬೆಳಗಾವಿ – 38

ಬೆಂಗಳೂರು ನಗರ – 23

ದಕ್ಷಿಣ ಕನ್ನಡ -17

ದಾವಣಗೆರೆ – 17

ಉಡುಪಿ – 13

ಶಿವಮೊಗ್ಗ – 12

ವಿಜಯಪುರ – 9

ಬೀದರ್ – 7

ಬಳ್ಳಾರಿ – 6

ಬೆಂಗಳೂರು ಗ್ರಾಮಾಂತರ – 5

ಹಾಸನ – 5

ಧಾರವಾಡ – 3

ಗದಗ -2

ಉತ್ತರ ಕನ್ನಡ – 2

ಮಂಡ್ಯ -1

ರಾಯಚೂರು -1

-masthmagaa.com

Contact Us for Advertisement

Leave a Reply