ಎರಡನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ: ದೆಹಲಿಗೆ ಮುತ್ತಿಗೆ ಪ್ರಯತ್ನ

masthmagaa.com:

ರೈತರ ಹೋರಾಟ ಎರಡನೇ ದಿನಕ್ಕೆ ಕಾಲಿಟ್ಟಿದೆ. ಎರಡನೇ ದಿನವೂ ರೈತರು ದೆಹಲಿಗೆ ಮುತ್ತಿಗೆ ಪ್ರಯತ್ನವನ್ನ ಕಂಟಿನ್ಯೂ ಮಾಡಿದ್ದಾರೆ. ಪೋಲಿಸರು ಬುಧವಾರವೂ ಟಿಯರ್‌ ಗ್ಯಾಸ್‌, ಜಲಫಿರಂಗಿ ಬಳಸಿ ರೈತರನ್ನ ಹತ್ತಿಕ್ಕೋ ಪ್ರಯತ್ನ ಮಾಡಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ರೈತರು ಜಮಾಯಿಸಿ, ಕೇಂದ್ರ ಸರ್ಕಾರ ಬೇಡಿಕೆಗಳನ್ನ ಪೂರೈಸೋವರೆಗೂ ಪ್ರತಿಭಟನೆ ಮಾಡ್ತೀವಿ ಅಂದಿದ್ದಾರೆ. ಪ್ರತಿಭಟನೆಗೆ ಬೆಂಬಲ ಕೊಡ್ತೀವಿ ಅಂತ ತಮಿಳುನಾಡು ರೈತರು ಘೋಷಣೆ ಮಾಡಿದ್ದಾರೆ. ತಮಿಳುನಾಡಿನ ತ್ರಿಚಿಯಲ್ಲಿ ದೆಹಲಿಗೆ ಹೊರಟಿರೋ ರೈತರ ಪರವಾಗಿ ಘೋಷಣೆ ಕೂಗಿ ಬೆಂಬಲ ಸೂಚಿಸಲಾಗಿದೆ. ಇನ್ನು ಫೆಬ್ರವರಿ 16ರಂದು ಗ್ರಾಮೀಣ ಭಾರತ ಬಂದ್‌ ನಡೆಸುವಂತೆ ಸಂಯುಕ್ತ ಕಿಸಾನ್‌ ಮೋರ್ಚಾ ಕರೆ ಕೊಟ್ಟಿದೆ. ಪ್ರತಿಭಟನೆ ತಡೆಯಲು ಸರ್ಕಾರದ ಪ್ರಿಪರೇಶನ್‌ಗೆ ಸಂಬಂಧಪಟ್ಟಂತೆ ಕಾಂಗ್ರೆಸ್ ಶಶಿತರೂರ್‌ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಚೀನಾ ಗಡಿಯಲ್ಲೂ ಇಷ್ಟು ಬಂದೋಬಸ್ತ್‌ ಇಲ್ಲ ಅಂತ ಟೀಕೆ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply