ದಕ್ಷಿಣ ಚೀನಾ ಸಮುದ್ರದಲ್ಲಿ ಭಾರತದ ಯುದ್ಧನೌಕೆಗಳ ನಿಯೋಜನೆ!

masthmagaa.com:

ಭಾರತದ ಅಕ್ಕ ಪಕ್ಕದ ದೇಶಗಳನ್ನ ಬುಟ್ಟಿಗೆ ಕೆಡವಿಕೊಂಡು ಭಾರತದ ವಿರುದ್ದ ಮಸಲತ್ತು ಮಾಡ್ತಿದ್ದ ಚೀನಾಗೆ ಭಾರತ ಕೌಂಟರ್‌ ಕೊಡೋದನ್ನ ಮುಂದುವರೆಸಿದೆ. ಮೊನ್ನೆ ಮೊನ್ನೆಯಷ್ಟೇ ಫಿಲಿಫೈನ್ಸ್‌ಗೆ ಬ್ರಹ್ಮೋಸ್‌ ಕೊಟ್ಟು ಚೀನಾಗೆ ಶಾಕ್‌ ಕೊಟ್ಟಿತ್ತು. ಈಗ ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಶತ್ರು ರಾಷ್ಟ್ರಗಳೊಂದಿಗೆ ಸೇರ್ಕೊಂಡು ಸಮರಾಭ್ಯಾಸ ಮಾಡೋಕೆ ಭಾರತ ರೆಡಿಯಾಗಿದೆ. ಅದಕ್ಕಾಗಿ ಭಾರತ ನೌಕಾಪಡೆಯ ಮೂರು ಯುದ್ಧನೌಕೆಗಳು ಈಗ ಸಿಂಗಾಪುರವನ್ನ ತಲುಪಿದೆ. ಗೈಡೆಡ್‌-ಮಿಸೈಲ್‌ ಡೆಸ್ಟ್ರಾಯರ್‌ INS ದೆಹಲಿ, ಫ್ಲೀಟ್‌ ಟ್ಯಾಂಕರ್‌ INS ಶಕ್ತಿ ಮತ್ತು ಆಂಟಿ-ಸಬ್‌ಮರೀನ್‌ ವಾರ್‌ಫೇರ್‌ ಕಾರ್ವೆಟ್‌ INS ಕಿಲ್ತಾನ್‌ನ್ನ ಸಮರಾಭ್ಯಾಸಕ್ಕೆ ನಿಯೋಜಿಸಲಾಗಿದೆ. ಈ ಬಗ್ಗೆ ರಿಯಾಕ್ಟ್‌ ಮಾಡಿರೋ ಭಾರತದ ನೌಕಾಪಡೆಯ ವಕ್ತಾರ ಕಮಾಂಡರ್‌ ವಿವೇಕ್‌ ಮಧ್ವಾಲ್‌, ʻ ಭಾರತದ ನೌಕಾಪಡೆ ಮತ್ತು ರಿಪಬ್ಲಿಕ್‌ ಆಫ್‌ ಸಿಂಗಾಪುರ್‌ ನೇವಿ ಕಳೆದ ಮೂರು ದಶಕಗಳಿಂದ ಒಂದೊಳ್ಳೆ ಸಹಕಾರ ಮತ್ತು ಸಹಯೋಗ ಹೊಂದಿದೆ..ಈ ಹೊಸ ಸಮರಾಭ್ಯಾಸ ಉಭಯ ರಾಷ್ಟ್ರಗಳ ನಡುವಿನ ದೀರ್ಘಕಾಲದ ಗೆಳೆತನ ಮತ್ತು ಸಹಕಾರ ಇನ್ನಷ್ಟು ಬಲಪಡಿಸೋಕೆ ಸಾಕ್ಷಿʼ ಅಂತೇಳಿದ್ಧಾರೆ. ಈ ಮೂಲಕ ದಿನಬೆಳಗಾದ್ರೆ, ದಕ್ಷಿಣ ಚೀನಾ ಸಮುದ್ರದಲ್ಲಿ ಕ್ಯಾತೆ ತೆಗೆಯೋ ಚೀನಾಗೆ ಭಾರತ ಟಕ್ಕರ್‌ ಕೊಡೋಕೆ ಮುಂದಾಗಿದೆ. ಅಷ್ಟೇ ಅಲ್ಲ ಹಿಂದೂ ಮಹಾಸಾಗರದಲ್ಲಿ ಚೀನಾದ ಮಿಸೈಲ್‌ ಟ್ರ್ಯಾಕಿಂಗ್‌ ಶಿಪ್‌ಗಳ ನಿಯೋಜನೆ ಮತ್ತು ಚೀನಿ ಸ್ಯಾಟಲೈಟ್‌ಗಳ ಕಣ್ಗಾವಲು ಹೆಚ್ಚಾಗಿರೋ ಬೆನ್ನಲ್ಲೇ ಭಾರತ ದಕ್ಷಿಣ ಚೀನಾ ಸಮುದ್ರದಲ್ಲಿ ಈ ಕಾರ್ಯಚರಣೆ ಕೈಗೊಂಡಿದೆ. ಹಾಗಂತ ಇದು ಮೊದಲ ಬಾರಿ ಅಲ್ಲ. ಇತ್ತೀಚಿಗೆ ಈ ನೌಕಾಭ್ಯಾಸ ಜಾಸ್ತಿ ಕೂಡ ಆಗಿದೆ. ದಕ್ಷಿಣ ಚೀನಾ ಸಮುದ್ರವನ್ನ ಸುತ್ತುವರೆದಿರೋ ಸಿಂಗಾಪುರ, ವಿಯೆಟ್ನಾಂ, ಇಂಡೋನೇಷ್ಯಾ ಮತ್ತು ಫಿಲಿಪೈನ್ಸ್‌ ಜೊತೆ ಸೇರಿ ರೆಗ್ಯುಲರ್‌ ಆಗಿ ಭಾರತ ಇಂತಹ ಜಂಟಿ ಅಭ್ಯಾಸಗಳನ್ನ, ಸೇನಾ ಟ್ರೈನಿಂಗ್‌ ಪ್ರೋಗ್ರಾಮ್‌ಗಳನ್ನ ಮಾಡ್ತಾ ಬಂದಿದೆ. ಈ ಮೂಲಕ ಪಾಕಿಸ್ತಾನಕ್ಕೆ ಆಯುಧ ಕೊಟ್ಟು, ಮಾಲ್ಡೀವ್ಸ್‌ನ್ನ ಎತ್ತಿಕಟ್ಟಿ ಲಂಕಾವನ್ನ ಬುಟ್ಟಿಗೆ ಕೆಡವಿಕೊಂಡು ಭಾರತದ ವಿರುದ್ದ ಅವರನ್ನ ಬಳಸಿಕೊಳ್ಳೋಕೆ ಮುಂದಾಗ್ತಿದ್ದ ಚೀನಾಗೆ ಈಗ ಭಾರತ ಕೂಡ ಸಖತ್ತಾಗೇ ಶಾಕ್‌ ಕೊಡ್ತಿದೆ. ದಕ್ಷಿಣ ಚೀನಾ ಸಮುದ್ರ ಕೇವಲ ನಿನ್ನ ಸ್ವತ್ತಲ್ಲ ಇದು ಎಲ್ಲರ ಸ್ವತ್ತು ಅನ್ನೋ ಮೆಸೇಜ್‌ ಪಾಸ್‌ ಮಾಡಿ, ಆ ಮೂಲಕ ಚೀನಾದ ಶತ್ರುಗಳ ಜೊತೆಗೆ ನಾನ್‌ ಇರ್ತೀನಿ ಅನ್ನೋ ಸಂದೇಶ ಕೊಡೋದಕ್ಕೆ ಭಾರತ ಹೆಜ್ಜೆ ಹಾಕಿದೆ.

-masthmagaa.com

Contact Us for Advertisement

Leave a Reply