ಜೆಡಿಎಸ್‌ ಪಾಲಾದ ಮಂಡ್ಯ: 3 ಕ್ಷೇತ್ರಗಳಲ್ಲಿ JDS ಅಭ್ಯರ್ಥಿಗಳು!

masthmagaa.com:

ರಾಜ್ಯದ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ ಅಂತ ಮಾಜಿ ಸಿಎಂ HD ಕುಮಾರಸ್ವಾಮಿ ಸ್ಪಷ್ಟ ಪಡಿಸಿದ್ದಾರೆ.ಜಿಡಿಎಸ್‌ ಕೋರ್‌ ಕಮೀಟಿ ಸಭೆ ಬಳಿಕ ಮಾತನಾಡಿದ ಕುಮಾರಸ್ವಾಮಿ ಮಂಡ್ಯ, ಹಾಸನ ಮತ್ತು ಕೋಲಾರದಲ್ಲಿ JDS ಅಭ್ಯರ್ಥಿಗಳನ್ನ ಕಣಕ್ಕಿಳಿಸಲಾಗುತ್ತದೆ ಅಂತೇಳಿದ್ದಾರೆ. ಈ ಮೂಲಕ ಮಂಡ್ಯದಲ್ಲಿ NDA ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಮಲತಾ ಕಣಕ್ಕಿಳಿಯೊದಿಲ್ಲ ಅನ್ನೊದು ಕನ್ಪರ್ಮ್ ಆಗಿದೆ.

ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಟಿಕೆಟ್‌ ಮಿಸ್‌ ಆಗಿರೊ ಮಾಜಿ ಸಿಎಂ ಡಿ.ವಿ ಸದಾನಂದಗೌಡರು ಕಾಂಗ್ರೆಸ್‌ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಖುದ್ದು ಪ್ರತಿಕ್ರಿಯೆ ನೀಡಿರೊ ಡಿವಿಎಸ್‌, ಬೇರೆ ಪಕ್ಷಗಳು ನನ್ನನ್ನ ಸಂಪರ್ಕ ಮಾಡ್ತಿವಿ ಅಂತೇಳಿದ್ದಾರೆ. ಅಲ್ದೇ ಲೋಕಸಭೆ ಚುನಾವಣೆಯಲ್ಲಿ ನನ್ನ ಮುಂದಿನ ನಡೆಯನ್ನ ಸದ್ಯದಲ್ಲೆ ತಿಳಿಸ್ತೀನಿ ಅಂತ ಡಿವಿಎಸ್‌ ಹೇಳಿದ್ದಾರೆ. ಈ ಮೂಲಕ ಡಿವಿಎಸ್‌ ಕೂಡ ಲಕ್ಷ್ಮಣ ಸವದಿ ಹಾದಿಯಲ್ಲೆ ಸಾಗೋ ಸಾಧ್ಯತೆ ಇದೆ ಅಂತೇಳಲಾಗ್ತಿದೆ.

ಅವಹೇಳನಕಾರಿ ಪೋಸ್ಟ್‌ ವಿಚಾರವಾಗಿ ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ದ ಬೆಂಗಳೂರಿನ ಹೈಗ್ರೌಂಡ್​ ಪೋಲಿಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ರಾಜ್ಯ ಬಿಜೆಪಿ ಎಕ್ಸ್‌ನಲ್ಲಿ ಹಾಕಿದ್ದ ಪೋಸ್ಟ್‌ವೊಂದರಲ್ಲಿ ಸಿಎಂ ನ್ಯೂಸ್‌ ಪೇಪರ್‌ ಓದ್ತಿದ್ದು, ಅದ್ರಲ್ಲಿ ಅವಹೇಳನಕಾರಿ ಬರಹಗಳು ಕಾಣುವಂತೆ ಬಿಂಬಿಸಲಾಗಿದೆ. ಹೀಗಾಗಿ ರಾಜ್ಯ ಬಿಜೆಪಿ X ಖಾತೆಯ ಅಡ್ಮಿನ್‌ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ದ ಕಾಂಗ್ರೆಸ್‌ ಪೋಲಿಸ್‌ ಠಾಣೆಗೆ ದೂರು ನೀಡಿದೆ. ದೂರು ದಾಖಲಾದ ಬೆನ್ನಲ್ಲೆ ಬಿಜೆಪಿ ಆ ಪೋಸ್ಟ್‌ ತೆಗೆದಿದೆ ಅಂತ ಗೊತ್ತಾಗಿದೆ.

ಇತ್ತ ಶಿವಮೊಗ್ಗದಲ್ಲಿ ಬಿಜೆಪಿ‌ ಲೋಕಸಭೆ ಟಿಕೆಟ್‌ನಿಂದ ವಂಚಿತವಾಗಿರೋ ಕೆ.ಎಸ್‌.ಈಶ್ವರಪ್ಪ ನಾನು ಸ್ವತಂತ್ರ ಸ್ಪರ್ಧೆ ಮಾಡೋದು ಫಿಕ್ಸ್‌ ಅಂದಿದ್ದಾರೆ. ಶಿವಮೊಗ್ಗದಲ್ಲಿ ಇಂದು ಆಯೋಜಿಸಲಾದ ಪ್ರಧಾನಿ ಮೋದಿ ಅವ್ರ ಕಾರ್ಯಕ್ರಮಕ್ಕೆ ಹಾಜರಾಗಲ್ಲ. ಅಲ್ದೆ ಚುನಾವಣೆಗೆ ಸ್ಪರ್ಧಿಸದಂತೆ RSS ಹಾಗೂ ಬಿಜೆಪಿ ನಾಯಕರು ಒತ್ತಾಯಿಸಿದ್ರು, ನಾನಂತೂ ಶಿವಮೊಗ್ಗ ಕ್ಷೇತ್ರದಿಂದ ಕಂಟೆಸ್ಟ್‌ ಮಾಡೇ ಮಾಡ್ತೀನಿ. ಹಿಂದೆ ಸರಿಯೋ ಮಾತೇ ಇಲ್ಲ ಅಂತ ಈಶ್ವರಪ್ಪ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply