ಬಾರ್‌ನಲ್ಲಿ ಬಾಂಬ್ ಬ್ಲಾಸ್ಟ್: ಆಫ್ರಿಕಾದ ನೈಜೀರಿಯಾದಲ್ಲಿ ಘಟನೆ

masthmagaa.com:

ನೈಜೀರಿಯಾದ ಬಾರ್‌ವೊಂದರ ಮೇಲಿನ ದಾಳಿಯಲ್ಲಿ ಮೂರು ಜನ ಮೃತಪಟ್ಟಿದ್ದು, 19 ಜನ ಗಾಯಗೊಂಡಿದ್ದಾರೆ. ಘಟನೆ ನೈಜಿರಿಯಾದ ಈಶಾನ್ಯ ಭಾಗದಲ್ಲಿರುವ ತರಬಾ ರಾಜ್ಯದಲ್ಲಿ ನಡೆದಿದೆ. ಅಲ್ಲಿನ ರಾಜಧಾನಿ ʼಜಲಿಂಗೊʼದ ಜಾನುವಾರು ಮಾರುಕಟ್ಟೆ ಬಳಿ ಜನಪ್ರಿಯ ಡ್ರಿಂಕಿಂಗ್‌ ಸ್ಥಳದಲ್ಲಿ ಈ ಸ್ಫೋಟ ಸಂಭವಿಸಿದೆ. ಅನಾಮಿಕ ವ್ಯಕ್ತಿಯೊಬ್ಬ ಸ್ಪೋಟಕವನ್ನ ಬಾರ್‌ನಲ್ಲಿ ಇಟ್ಟಿದ್ದು, ತನಿಖೆ ನಡೆಯುತ್ತಿದೆ ಅಂತ ತರಬಾ ರಾಜ್ಯ ಪೋಲಿಸ್‌ ವಕ್ತಾರ ಅಬ್ದುಲ್ಲಾಹಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply