ತಾಲಿಬಾನಿಗಳ ವಶವಾಯ್ತ ಪಂಜ್‌ಶಿರ್ ಪ್ರಾಂತ್ಯ?

masthmagaa.com:

20 ವರ್ಷಗಳ ಸಂಘರ್ಷದ ಬಳಿಕ ಅಫ್ಘಾನಿಸ್ತಾನ ಟೇಕೋವರ್ ಮಾಡಿದ ತಾಲಿಬಾನ್​​ಗೆ ಪಂಜ್​ಶಿರ್​ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ವಿನ್ ಆಗಕ್ಕೆ ಆಗ್ತಿಲ್ಲ.. ಬಿಟ್ಟು ಕೂತ್ರೆ ಮರ್ಯಾದೆ ಇರಲ್ಲ.. ಇಂಥಾ ಸಿಚುವೇಷನ್​​ನಲ್ಲಿದೆ ತಾಲಿಬಾನ್ ಪಡೆ.. ಆದ್ರೆ ನಿನ್ನೆಯಷ್ಟೇ ಪಂಜ್​ಶಿರ್​​ನಿಂದ ಅಮರುಲ್ಲಾ ಸಲೇಹ್ ಪಲಾಯನ ಮಾಡಿದ್ದಾರೆ ಅಂತ ವರದಿಯಾಗಿತ್ತು. ಅದ್ರ ಬೆನ್ನಲ್ಲೇ ತಾಲಿಬಾನಿಗಳು ನಾವು ಪಂಜ್​ಶಿರ್​​ನ್ನು ವಶಕ್ಕೆ ಪಡ್ಕೊಂಡಿದ್ದೀವಿ ಅಂತ ಘೋಷಿಸಿಕೊಂಡಿದ್ದಾರೆ. ಅಲ್ಲಾ ಕೃಪೆಯಿಂದ ನಾವು ಈಗ ಇಡೀ ಅಫ್ಘಾನಿಸ್ತಾನವನ್ನು ನಿಯಂತ್ರಿಸುತ್ತಿದ್ದೇವೆ. ಶತ್ರುಗಳನ್ನು ಸೋಲಿಸಿದ್ದೇವೆ. ಪಂಜ್​ಶಿರ್ ನಮ್ಮ ಕಂಟ್ರೋಲ್​​ಗೆ ಬಂದಿದೆ ಅಂತ ಹೇಳಿಕೊಂಡಿದೆ. ಆದ್ರೆ ಈ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಗೊಂದಲ ಮುಂದುವರಿದಿದೆ. ಯಾಕಂದ್ರೆ ಈ ಬಗ್ಗೆ ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ಅವರ ಹೇಳಿಕೆಯ ವಿಡಿಯೋವೊಂದನ್ನು ಬಿಬಿಸಿ ಟ್ವೀಟ್ ಮಾಡಿದೆ. ಅದ್ರಲ್ಲಿ ಪಂಜ್​ಶಿರ್ ಸದ್ಯದ ಪರಿಸ್ಥಿತಿ ಬಗ್ಗೆ ಮಾತನಾಡಿರೋ ಅವರು, ನಾವು ಕಷ್ಟದ ಪರಿಸ್ಥಿತಿಯಲ್ಲಿದ್ದೀವಿ ನಿಜ.. ತಾಲಿಬಾನಿಗಳ ಅತಿಕ್ರಮಣಕ್ಕೆಒಳಪಟ್ಟಿದ್ದೀವಿ. ಆದ್ರೆ ಇನ್ನೂ ಸೋತಿಲ್ಲ ಅಂದಿದ್ದಾರೆ. ನ್ಯಾಷನಲ್ ರೆಸಿಸ್ಟೆನ್ಸ್ ಫೋರ್ಸ್​​ನ ಲೀಡರ್ ಅಹ್ಮದ್ ಮಸ್ಸೌದ್ ಕೂಡ ತಾಲಿಬಾನಿಗಳು ಪಂಜ್​ಶಿರ್​​ನ್ನು ವಶಕ್ಕೆ ಪಡ್ಕೊಂಡಿದ್ದಾರೆ ಅಂತ ಪಾಕ್ ಮಾಧ್ಯಮಗಳಲ್ಲಿ ಸುದ್ದಿಯಾಗ್ತಿದೆ. ಆದ್ರೆ ಅದು ಸುಳ್ಳು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply