ಸುಳ್ಳು ಸುದ್ಧಿ ಹರಡಿದ್ರೆ 3 ವರ್ಷ ಜೈಲೂಟ ಗ್ಯಾರಂಟಿ!

masthmagaa.com:

ಇನ್ಮುಂದೆ ಸೋಷಿಯಲ್‌ ಮೀಡಿಯಾದಲ್ಲಿ ಯಾವುದಾದ್ರೂ ಸುದ್ಧಿಯನ್ನ ಶೇರ್‌ ಮಾಡೋಕು ಮುಂಚೆ ಸ್ವಲ್ಪ ಅದರ ಸತ್ಯಾಸತ್ಯತೆ ತಿಳ್ಕೊಂಡು ಶೇರ್‌ ಮಾಡಿ. ಯಾಕಂದ್ರೆ ನೆನ್ನೆ ಲೋಕಸಭೆಯಲ್ಲಿ ಮಂಡನೆಯಾದ ಭಾರತೀಯ ನ್ಯಾಯ ಸಂಹಿತೆ ಮಸೂದೆಯಲ್ಲಿ ಸುಳ್ಳು ಸುದ್ಧಿ ಸ್ಪ್ರೆಡ್‌ ಮಾಡೋರಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಅಂತ ತಿಳಿಸಲಾಗಿದೆ. ಈ ಪ್ರಸ್ತಾವಿತ ಮಸೂದೆಯನ್ನು ಪರಿಶೀಲನೆಗಾಗಿ ಸ್ಥಾಯಿ ಸಮಿತಿಗೆ ಕಳುಹಿಸಲಾಗಿದೆ. ಭಾರತದ ಸಾರ್ವಭೌಮತ್ವ ಮತ್ತು ಭದ್ರತೆಗೆ ಧಕ್ಕೆ ತರುವಂತಹ ‘ನಕಲಿ ಸುದ್ದಿ ಅಥವಾ ತಪ್ಪು ಮಾಹಿತಿಗಳನ್ನು’ ಹರಡುವವರಿಗೆ ಸೆಕ್ಷನ್ 195ರ ಅಡಿಯಲ್ಲಿ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶ ನೀಡಲಾಗಿದೆ.

-masthmagaa.com

Contact Us for Advertisement

Leave a Reply