ಫ್ರಾನ್ಸ್‌: ಹಾಲ್ಟ್‌ ಆಗಿದ್ದ ವಿಮಾನ ಹಾರಾಟಕ್ಕೆ ಸಿಕ್ತು ಒಪ್ಪಿಗೆ!

masthmagaa.com:

4 ದಿನಗಳ ಕಾಲ ಫ್ರಾನ್ಸ್‌ನ ಏರ್‌ಪೋರ್ಟ್‌ ಒಂದ್ರಲ್ಲಿ ಹಾಲ್ಟ್‌ ಆಗಿದ್ದ 303 ಭಾರತೀಯರಿದ್ದ ವಿಮಾನಕ್ಕೆ ಇದೀಗ ಹಾರಾಟ ನಡೆಸೋಕೆ ಅಲ್ಲಿನ ಕೋರ್ಟ್‌ ಅನುಮತಿ ನೀಡಿದೆ. 2 ದಿನಗಳ ಕಾಲ ವಿಮಾನದಲ್ಲಿದ್ದ ಪ್ಯಾಸೆಂಜರ್‌ಗಳ ವಿಚಾರಣೆ ನಡೆಸಿದ ನಂತರ ಡಿಸೆಂಬರ್‌ 24 ರಂದು ಫ್ರೆಂಚ್‌ ಕೋರ್ಟ್ ವಿಮಾನದ ಹಾರಾಟಕ್ಕೆ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ. ಡಿಸೆಂಬರ್‌ 25 ಅಂದ್ರೆ ಇವತ್ತು ವಿಮಾನ ನಿರ್ಗಮಿಸೋ ಬಗ್ಗೆ ಕಂಪ್ಲೀಟ್‌ ಒಪ್ಪಿಗೆ ನೀಡಲಾಗಿದೆ. ಜೊತೆಗೆ ಇಂದೇ ವಿಮಾನ ಹಾರಾಟ ನಡೆಸಲಿದೆ ಅಂತಾನೂ ಹೇಳಲಾಗ್ತಿದೆ. ಆದ್ರೆ ಈ ವಿಮಾನದ ಡೆಸ್ಟಿನೇಷನ್‌ ಏನಿರುತ್ತೆ ಅಂದ್ರೆ ಎಲ್ಲಿಗೆ ಹೋಗುತ್ತೆ ಅನ್ನೋ ಬಗ್ಗೆ ಯಾವ್ದೇ ರೀತಿ ಸ್ಟೇಟ್‌ಮೆಂಟ್‌ ನೀಡಿಲ್ಲ. ಇನ್ನು ಈ ಬಗ್ಗೆ ಪ್ರೆಸ್‌ ಕಾನ್ಫರೆನ್ಸ್‌ನಲ್ಲಿ ಮಾತನಾಡಿರೋ ಫ್ರೆಂಚ್‌ ಕೋರ್ಟ್‌ನ ಪ್ರತಿನಿಧಿಯೊಬ್ರು, ʻವಿಮಾನದ ಪ್ಯಾಸೆಂಜರ್ಸ್‌ ಭಾರತಕ್ಕೆ ಹಾರಾಟ ನಡೆಸಲಿದ್ದಾರೆʼ ಅಂತ ಹೇಳಿದ್ದಾರೆ. ಆದ್ರೆ ಈ ಬಗ್ಗೆ ಭಾರತೀಯ ಅಧಿಕಾರಿಗಳಿಂದ ಯಾವ್ದೇ ರೀತಿ ಕನ್ಫರ್ಮೇಷನ್‌ ಬಂದಿಲ್ಲ. ಅಂದ್ಹಾಗೆ ಈ ವಿಮಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರಿದ್ದು, ಕನಿಷ್ಠ 11 ಮಂದಿ ಪೋಷಕರಿಲ್ಲದ ಅಪ್ರಾಪ್ತ ವಯಸ್ಸಿನ ಮಕ್ಕಳಿದ್ರು. ದುಬೈಯಿಂದ ಟೇಕ್‌ ಆಫ್‌ ಆದ Airbus A340 ಡಿಸೆಂಬರ್‌ 21 ರಂದು ನಿಕರಾಗುವಾ ಕಡೆ ಪ್ರಯಾಣ ಬೆಳೆಸಿತ್ತು.

-masthmagaa.com

Contact Us for Advertisement

Leave a Reply