ಮಕ್ಕಳ ಕೈಗೆ ಮೊಬೈಲ್‌ ಕೊಡೋ ಮುನ್ನ ಈ ಸ್ಟೋರಿ ನೋಡಿ..

masthmagaa.com:

ಮಕ್ಕಳು ಅತ್ಕೂಡ್ಲೆ ಏ ಪಾಪೂ ತಗೊ ತಗೊ ಮೊಬೈಲ್ ತಗೋ ಅಂತೀರಾ.. ಮಕ್ಕಳು ಮೊಬೈಲ್ ಬಳಸೋದನ್ನ ನೋಡಿ, ನಮ್ ಪಾಪು ಹೆಂಗ್ ಮೊಬೈಲ್ ಯೂಸ್ ಮಾಡ್ತಾನೆ ಗೊತ್ತಾ ಅಂತ ಹೊಗಳಿ ಅಟ್ಟಕ್ಕೆ ಏರಿಸ್ತೀರಾ.. ಹಾಗಿದ್ರೆ ನೀವು ಈ ಸುದ್ದಿ ನೋಡ್ಲೇಬೇಕು.. ಎನ್​ಸಿಪಿಸಿಆರ್ ರಾಷ್ಟ್ರೀಯ ಮಕ್ಕಳ ಹಕ್ಕು ಸರಂಕ್ಷಣಾ ಆಯೋಗ ಒಂದು ಸಮೀಕ್ಷೆ ನಡೆಸಿ, ವರದಿ ಬಿಡುಗಡೆ ಮಾಡಿದೆ. ಒಟ್ಟು 59.2 ಪರ್ಸೆಂಟ್​ನಷ್ಟು ಮಕ್ಕಳು ಸ್ಮಾರ್ಟ್​ ಫೋನ್​​ಗಳನ್ನು ಕೇವಲ ಮೆಸೆಜಿಂಗ್​, ಚಾಟಿಂಗ್​​ಗಾಗಿ ಬಳಸ್ತಿದ್ದಾರೆ.. 10.1 ಪರ್ಸೆಂಟ್​ನಷ್ಟು ಮಕ್ಕಳು ಮಾತ್ರವೇ ಸ್ಮಾರ್ಟ್​​​​ಫೋನ್ ಮೂಲಕ ಶಿಕ್ಷಣ ಪಡೆಯೋಕೆ, ಆನ್​ಲೈನ್ ಕ್ಲಾಸ್ ಲಾಭ ಪಡೆಯಲು ಬಳಸ್ತಿದ್ದಾರೆ ಅಂತ ಈ ಸಮೀಕ್ಷೆಯಿಂದ ಗೊತ್ತಾಗಿದೆ. ಸ್ಮಾರ್ಟ್​ ಫೋನ್ ಅಥವಾ ಇಂಟರ್​ನೆಟ್ ಇರೋ ಡಿವೈಸ್​​ಗಳ ಬಳಕೆ ಮಕ್ಕಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಅನ್ನೋದನ್ನ ತಿಳಿಯೋಕೆ ಈ ಸಮೀಕ್ಷೆ ನಡೆಸಲಾಗಿತ್ತು. ಈ ಸಮೀಕ್ಷೆ ಪ್ರಕಾರ 8ರಿಂದ 18 ವರ್ಷದೊಳಗಿನ 30.2 ಪರ್ಸೆಂಟ್ ಮಕ್ಕಳು ತಮ್ಮದೇ ಆದ ಸ್ಮಾರ್ಟ್​​ಫೋನ್ ಹೊಂದಿದಾರೆ. ಇಷ್ಟಕ್ಕೆ ಮುಗೀಯೋದಿಲ್ಲ.. 10 ವರ್ಷದ 37.8 ಪರ್ಸೆಂಟ್ ಮಕ್ಕಳು ಫೇಸ್​ಬುಕ್ ಖಾತೆ ಹೊಂದಿದ್ರೆ, 24.3 ಪರ್ಸೆಂಟ್​​ನಷ್ಟು ಮಂದಿ ಇನ್​ಸ್ಟಾಗ್ರಾಂ ಖಾತೆ ಹೊಂದಿದಾರೆ ಅನ್ನೋದು ಗೊತ್ತಾಗಿದೆ. ಅಂದಹಾಗೆ ಈ ಸಮೀಕ್ಷೆಯಲ್ಲಿ ಒಟ್ಟು 5,811 ಮಂದಿ ಭಾಗಿಯಾಗಿದ್ರು. ಇವರಲ್ಲಿ 60 ಶಾಲೆಗಳ 3,491 ಮಕ್ಕಳು, 1,534 ಮಂದಿ ಪೋಷಕರು ಮತ್ತು 786 ಮಂದಿ ಪೋಷಕರನ್ನು ಸೇರಿಸಿಕೊಳ್ಳಲಾಗಿತ್ತು. ಮೊಬೈಲ್ ಬಳಕೆಯಿಂದಾಗಿ ಮಕ್ಕಳು ನಿದ್ದೆ ಸರಿಯಾಗಿ ಮಾಡ್ತಿಲ್ಲ. ಇದ್ರಿಂದ ಮಾನಸಿಕವಾಗಿ ಸ್ಟ್ರೆಸ್ ಅನುಭವಿಸ್ತಿದ್ದು, ನಿಶ್ಯಕ್ತಿ ಅನುಭವಿಸ್ತಿದ್ದಾರೆ. ಸರಿಯಾಗಿ ಓದ್ತಿಲ್ಲ.. ಹೊರಾಂಗಣ ಕ್ರೀಡೆಯಿಂದ ದೂರ ಉಳಿಯುತ್ತಿದ್ದು, ದೈಹಿಕ ಚಟುವಟಿಕೆಯಿಂದ ದೂರ ಉಳೀತಿದ್ದಾರೆ. ಸೋ ಇನ್ಮುಂದೆ ಮಕ್ಕಳಿಗೆ ಮೊಬೈಲ್ ಕೊಡುವ ಮುನ್ನ ನೂರು ಬಾರಿ ಯೋಚಿಸಿ. ಸಣ್ಣ ಸಣ್ಣ ಮಕ್ಕಳಿಗೆ ಮೊಬೈಲ್ ತೋರಿಸಿ ಸಮಾಧನ ಮಾಡೋದು ಮೊದಲು ಬಿಡಿ.. ಯಾಕಂದ್ರೆ ಚಿಕ್ಕಂದಿನಿಂದಲೇ ಈ ಅಭ್ಯಾಸ ಹೋಗ್ತಾ ಹೋಗ್ತಾ ದೊಡ್ಡದಾಗೋ ಸಾಧ್ಯತೆ ಇರುತ್ತೆ.

-masthmagaa.com

Contact Us for Advertisement

Leave a Reply