ರಷ್ಯಾ ಸೇನೆಗೆ ಭಾರತೀಯರನ್ನ ಕಳಿಸೊ ಜಾಲದಲ್ಲಿ ನಾಲ್ವರ ಬಂಧನ!

masthmagaa.com:

ಯುಕ್ರೇನ್‌ ಜೊತೆಗಿನ ಯುದ್ದದಲ್ಲಿ ರಷ್ಯಾ ಸೇನೆಗೆ ಭಾರತೀಯರನ್ನ ಕಳಿಸುತ್ತಿದ್ದ ಜಾಲದಲ್ಲಿ ನಾಲ್ವರನ್ನ ಹಿಡಿದಾಕಿರೊದಾಗಿ ಕೇಂದ್ರಿಯ ತನಿಖಾದಳ (ಸಿಬಿಐ) ಹೇಳಿದೆ. ರಷ್ಯಾದಲ್ಲಿ ಲಾಭದಾಯಕ ಉದ್ಯೋಗ ಕೊಡಿಸೊದಾಗಿ ಮಾನವ ಕಳ್ಳಸಾಗಾಣೆ ಧಂಧೆಯಲ್ಲಿ ಅರುಣ್‌, ಯೆಸುದಾಸ್‌ ಜ್ಯೂನಿಯರ್‌, ನಿಜಿಲ್‌ ಜೊಬಿ ಬೆನ್ಸಮ್‌ ಮತ್ತು ಆಂಥೋನಿ ಮೈಕಲ್‌ ಇಳಂಗೋವನ್‌ ಅನ್ನೊರನ್ನ ಬಂಧಿಸಲಾಗಿದ್ದು, ಇದ್ರಲ್ಲಿ ಈ ಬೆನ್ಸಮ್‌ ಅನ್ನೊ ವ್ಯಕ್ತಿ ಗುತ್ತಿಗೆ ಆಧಾರದ ಮೇಲೆ ರಷ್ಯಾದಲ್ಲಿ ಭಾಷಾಂತರ ಕೆಲ್ಸ ಮಾಡ್ಕೊಂಡು ಈ ಜಾಲದಲ್ಲಿ ಪ್ರಮುಖ ಪಾತ್ರ ನಿಭಾಯಿಸ್ತಿದ್ದ ಅಂತ ಸಿಬಿಐ ತಿಳಿಸಿದೆ. ಇನ್ನು ಇಳಂಗೋವನ್‌ ಅನ್ನೊ ವ್ಯಕ್ತಿ ರಷ್ಯಾಗೆ ಭಾರತೀಯರನ್ನ ಕಳುಹಿಸಲು ಚೆನ್ನೈನಲ್ಲಿ ಅವ್ರಿಗೆಲ್ಲ ವೀಸಾ ಕೊಡಿಸೊ ಪ್ರಕ್ರಿಯೆಯಲ್ಲಿ ಮಹತ್ವದ ಪಾತ್ರ ವಹಿಸ್ತಿದ್ದ. ಅಲ್ದೇ ಇನ್ನುಳಿದ ಅರುಣ್‌ ಮತ್ತು ಯೆಸುದಾಸ್‌ ಜ್ಯೂನಿಯರ್ ಇವರಿಬ್ರು ಕೇರಳ ಹಾಗೂ ತಮಿಳುನಾಡಿನಿಂದ ರಷ್ಯಾಗೆ ಅಕ್ರಮವಾಗಿ ಭಾರತೀಯರನ್ನ ಕಳುಹಿಸೊ ಧಂಧೆಯಲ್ಲಿ ತೊಡಗಿಸಿಕೊಂಡಿದ್ರು ಅಂತ ಸಿಬಿಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು ಯುಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ ಅವ್ರ ಹತ್ಯೆಗೆ ಸಂಚು ರೂಪಿಸಿದ್ದ ಇಬ್ಬರು ಏಜೆಂಟ್‌ರನ್ನ ಅರೆಸ್ಟ್‌ ಮಾಡಿರೋದಾಗಿ ಯುಕ್ರೇನ್‌ ಹೇಳಿದೆ. ರಷ್ಯಾದ ಫೆಡೆರಲ್‌ ಸೆಕ್ಯುರಿಟಿ ಸರ್ವಿಸ್‌ನಿಂದ ನೇಮಕಗೊಂಡಿದ ವ್ಯಕ್ತಿಗಳು ಯುಕ್ರೇನ್‌ನ ಸ್ಟೇಟ್‌ ಗಾರ್ಡ್‌ ಸರ್ವಿಸ್‌ನಲ್ಲಿ ಕರ್ನಲ್‌ಗಳಾಗಿ ಸೇವೆ ಸಲ್ಲಿಸ್ತಿದ್ರು. ಇವ್ರು ರಷ್ಯಾಗೆ ರಹಸ್ಯ ಮಾಹಿತಿಯನ್ನ ನೀಡಿ, ಝೆಲೆನ್ಸ್ಕಿ ಅವ್ರ ಹತ್ಯೆಗೆ ಸಂಚು ರೂಪಿಸಿದ ಕೆಲಸದಲ್ಲಿ ಭಾಗಿಯಾಗಿದ್ರು ಅಂತ ಯುಕ್ರೇನ್‌ ಹೇಳಿದೆ. ಅಂದ್ಹಾಗೆ
ಮಂಗಳವಾರ ಐದನೇ ಬಾರಿಗೆ ರಷ್ಯಾಧ್ಯಕ್ಷರಾಗಿ ಪದಗ್ರಹಣ ಮಾಡಿದ ವ್ಲಾಡಿಮಿರ್‌ ಪುಟಿನ್‌ ಅವ್ರಿಗೆ ವಿಶೇಷ ಉಡುಗೊರೆ ನೀಡಲು ಈ ಯೋಜನೆ ರೂಪಿಸಲಾಗಿತ್ತು ಅಂತ ವರದಿಯಾಗಿದೆ.

-masthmagaa.com

Contact Us for Advertisement

Leave a Reply