ಕಾನೂನು ಬಾಹಿರವಾಗಿ ವಾಸಿಸುತ್ತಿದ್ದ 4 ಚೀನಿಯರನ್ನ ಅರೆಸ್ಟ್‌ ಮಾಡಿದ ಸ್ಪೆಶಲ್‌ ಟಾಸ್ಕ್‌ ಫೋರ್ಸ್‌!

masthmagaa.com:

ಭಾರತದಲ್ಲಿ ಕಾನೂನು ಬಾಹಿರವಾಗಿ ವಾಸಿಸುತ್ತಿದ್ದ 4 ಚೀನಿಯರನ್ನ ಉತ್ತರ ಪ್ರದೇಶದ ನೊಯ್ಡಾದಲ್ಲಿ ಅರೆಸ್ಟ್‌ ಮಾಡಲಾಗಿದೆ. ಚೀನಾದೊಂದಿಗೆ ನಂಟು ಹೊಂದಿರೊ ಶಂಕಿತ ಹವಾಲಾ ದಂಧೆ ಕುರಿತು ಉತ್ತರ ಪ್ರದೇಶ ಪೊಲೀಸರ ಸ್ಪೆಶಲ್‌ ಟಾಸ್ಕ್‌ ಫೋರ್ಸ್‌ ತನಿಖೆ ನಡೆಸುತ್ತಿತ್ತು. ಈ ವೇಳೆ 2020ರಿಂದ ಅಧಿಕೃತ ವೀಸಾ ಇಲ್ದೇ ಗ್ರೇಟರ್‌ ನೊಯ್ಡಾದಲ್ಲಿ ವಾಸಿಸುತ್ತಿದ್ದ 4 ಜನರನ್ನ ಬಂಧಿಸಲಾಗಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಜೂನ್‌ 13 ರಂದು ಇದೇ ಆರೋಪದಲ್ಲಿ ಬಂಧಿಸಲಾಗಿದ್ದ ಶ್ಯು ಫೀ ಅಲಿಯಾಸ್‌ ಕೆಲೆ ಎಂಬ ಆರೋಪಿ ಜೊತೆ ಈ 4 ಜನರು ಲಿಂಕ್‌ ಹೊಂದಿದ್ರು ಅಂತ ಗೊತ್ತಾಗಿದೆ. ನೆನ್ನೆ ಕೂಡ ಚೀನಾದ ಇದೇ ರೀತಿ 14 ಚೀನಾದ ಪ್ರಜೆಗಳನ್ನ ಬಂಧಿಸಲಾಗಿತ್ತು.

-masthmagaa.com

Contact Us for Advertisement

Leave a Reply