masthmagaa.com:

ಕಳೆದ 15 ದಿನಗಳಿಂದ ದೇಶದ 70 ಜಿಲ್ಲೆಗಳಲ್ಲಿ ಕೊರೋನಾ ಕೇಸ್​ಗಳು 150 ಪರ್ಸೆಂಟ್​ಗೂ ಹೆಚ್ಚಿನ ಪ್ರಮಾಣದಲ್ಲಿ ಜಾಸ್ತಿಯಾಗಿದೆ ಅಂತ ಪ್ರಧಾನಿ ಮೋದಿ ಹೇಳಿದ ಬೆನ್ನಲ್ಲೇ, ಕೇಂದ್ರ ಆರೋಗ್ಯ ಇಲಾಖೆ ಸುದ್ದಿಗೋಷ್ಠಿ ನಡೆಸಿ ಆ ಜಿಲ್ಲೆಗಳು ಯಾವ್ದು ಅಂತ ಮಾಹಿತಿ ನೀಡಿದೆ. ಇದರಲ್ಲಿ ಕರ್ನಾಟಕದ 4 ಜಿಲ್ಲೆಗಳಿವೆ. ಬೀದರ್, ಬಾಗಲಕೋಟೆ, ಗದಗ ಮತ್ತು ಕೋಲಾರ.. ಕೆಳಗಿರುವ ಮ್ಯಾಪ್​ನಲ್ಲಿ ಅವುಗಳನ್ನ ರೆಡ್​ ಕಲರ್​ನಲ್ಲಿ ತೋರಿಸಲಾಗಿದೆ. ಇದನ್ನ ಬಿಟ್ರೆ ಹಳದಿ ಬಣ್ಣದಲ್ಲಿರೋ ಜಿಲ್ಲೆಗಳಲ್ಲಿ ಕೊರೋನಾ ಪ್ರಕರಣಗಳು 100ರಿಂದ 150 ಪರ್ಸೆಂಟ್ ಜಾಸ್ತಿಯಾಗಿದೆ. ರಾಜ್ಯದಲ್ಲಿ ಇಂಥಾ 5 ಜಿಲ್ಲೆಗಳಿವೆ.. ಕಲಬುರಗಿ, ಯಾದಗಿರಿ, ರಾಯಚೂರು, ಧಾರವಾಡ ಮತ್ತು ಬೆಂಗಳೂರು ಗ್ರಾಮಾಂತರ. ಸೋ ಈ 9 ಜಿಲ್ಲೆಗಳ ಜನ, ಜಿಲ್ಲಾಡಳಿತ ಮತ್ತು ಅಧಿಕಾರಿಗಳು ಹೆಚ್ಚು ಅಲರ್ಟ್ ಆಗಿರಬೇಕು.

ಇನ್ನು ರಾಜ್ಯದಲ್ಲಿ ಕೊರೋನಾ ಪಾಸಿಟಿವಿಟಿ ರೇಟ್ 1.3 ಪರ್ಸೆಂಟ್​ ಇದೆ. ಹೀಗಾಗಿ ಕೊರೋನಾ ಪರೀಕ್ಷೆಗಳನ್ನ ಹೆಚ್ಚಿಸಬೇಕು ಅಂತ ಕೇಂದ್ರ ಆರೋಗ್ಯ ಇಲಾಖೆ ರಾಜ್ಯ ಸರ್ಕಾರಕ್ಕೆ ವಿಶೇಷ ಸಲಹೆ ನೀಡಿದೆ.

ಇನ್ನು ಪ್ರಧಾನಿ ಮೋದಿ ಲಸಿಕೆ ವೇಸ್ಟ್​ ಆಗ್ತಿದೆ. ಅದನ್ನ ತಪ್ಪಿಸಿ ಅಂತ ಹೇಳಿದ ಬೆನ್ನಲ್ಲೇ ಲಸಿಕೆ ಹೆಚ್ಚು ವೇಸ್ಟ್​ ಆಗ್ತಿರೋ ರಾಜ್ಯಗಳನ್ನ ಕೇಂದ್ರ ಆರೋಗ್ಯ ಇಲಾಖೆ ಪಟ್ಟಿ ಮಾಡಿದೆ. ಅದ್ರಲ್ಲಿ ತೆಲಂಗಾಣ ಮತ್ತು ಆಂಧ್ರಪ್ರದೇಶ ಮೊದಲೆರಡು ಸ್ಥಾನದಲ್ಲಿವೆ. ತೆಲಂಗಾಣದಲ್ಲಿ 17.6 ಪರ್ಸೆಂಟ್ ಮತ್ತು ಆಂಧ್ರದಲ್ಲಿ 11.6 ಪರ್ಸೆಂಟ್​ ವ್ಯಾಕ್ಸಿನ್ ವೇಸ್ಟೇಜ್ ಇದೆ. 17.6 ಪರ್ಸೆಂಟ್ ಅಂದ್ರೆ 100 ಲಸಿಕೆಯಲ್ಲಿ 17 ಲಸಿಕೆ ವೇಸ್ಟ್ ಅಂತ ಹೇಳಬಹುದು. ಒಟ್ಟಾರೆ ದೇಶದಲ್ಲಿ ಈ ಪ್ರಮಾಣ 6.5 ಪರ್ಸೆಂಟ್ ಇದೆ.

-masthmagaa.com

Contact Us for Advertisement

Leave a Reply