ಸಬ್‌ಇನ್ಸ್‌ಪೆಕ್ಟರ್‌ನಿಂದಲೇ 4 ವರ್ಷದ ಮಗು ಮೇಲೆ ಅತ್ಯಾಚಾರ! ಧರ್ಮದೇಟು ಕೊಟ್ಟ ಜನ!

masthmagaa.com:

ರಾಜಸ್ಥಾನದಲ್ಲಿ ಮತ್ತೊಂದು ಮಾನವ ಜನ್ಮವೇ ನಾಚಿ ತಲೆತಗ್ಗಿಸುವಂತಹ ಘಟನೆ ನಡೆದಿದೆ. 4 ವರ್ಷದ ಪುಟ್ಟ ಕಂದಮ್ಮನ ಮೇಲೆ ಅತ್ಯಾಚಾರ ಆಗಿದೆ. ಆಘಾತಕಾರಿ ವಿಚಾರ ಅಂದ್ರೆ ಈ ಪ್ರಕರಣದಲ್ಲಿ ಸಬ್‌ ಇನ್ಸ್‌ಪೆಕ್ಟರ್‌ ಒಬ್ಬ ಬಂಧನಕ್ಕೊಳಗಾಗಿದ್ದಾನೆ. ರಾಜಸ್ತಾನದ ದೌಸ ಜಿಲ್ಲೆಯಲ್ಲಿ ಈ ವಿಕೃತ ಘಟನೆ ನಡೆದಿದೆ. ಆರೋಪಿ ಪೊಲೀಸ್‌ನನ್ನ ಭೂಪೇಂದ್ರ ಸಿಂಗ್‌ ಅಂತ ಗುರುತಿಸಲಾಗಿದೆ. ಮಗುವಿಗೆ ಆಮಿಷ ಒಡ್ಡಿ ಈ ನೀಚ ಕೃತ್ಯ ಎಸಗಿದ್ದಾನೆ ಅಂತ ಅಲ್ಲಿನ ಎಎಸ್‌ಪಿ ರಾಮಚಂದ್ರ ಸಿಂಗ್‌ ನೇಹ್ರಾ ತಿಳಿಸಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಜನ ಪೊಲೀಸ್‌ ಠಾಣೆ ಮುಂದೆ ಜಮಾಯಿಸಿದ್ದಾರೆ. ಪೊಲೀಸರ ವಿರುದ್ದ ಘೋಷಣೆಗಳನ್ನ ಕೂಗಿದ್ದಾರೆ. ಆರೋಪಿ ಪೊಲೀಸ್‌ಗೂ ಧರ್ಮದೇಟು ಕೊಟ್ಟಿದ್ದಾರೆ. ಕೂಡಲೇ ಆ ಆರೋಪಿಯನ್ನ ರಕ್ಷಣೆ ಮಾಡಿ ವಿಚಾರಣೆ ನಡೆಸಲಾಗ್ತಿದೆ. ಈ ಭೂಪೇಂದ್ರ ಸಿಂಗ್‌ ಮೇಲೆ ಈ ಮುಂಚೆಯೂ ಹಲವು ಆರೋಪಗಳು ಕೇಳಿ ಬಂದಿದ್ದು ಈತನಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

-masthmagaa.com

Contact Us for Advertisement

Leave a Reply