ಆರೋಪಿ ಚೈತ್ರ ಕುಂದಾಪುರ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಂಡ ಪೊಲೀಸರು! ಎಷ್ಟಿತ್ತು ಗೊತ್ತಾ ಆಸ್ತಿ?
masthmagaa.com: ಬಿಜೆಪಿ ಟಿಕೆಟ್ ಕೊಡಿಸೋದಾಗಿ ವಂಚನೆ ಕೇಸ್‌ನಲ್ಲಿ ಬಂಧಿಸಲಾಗಿರುವ ಚೈತ್ರ ಮನೆಯಲ್ಲಿ 65 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಸಂಬಂಧಿಕರ ಹೆಸರಿನಲ್ಲಿ ಕೋಟಿ ರೂಪಾಯಿ ಠೇವಣಿ ಇಟ್ಟಿರುವುದು ಪತ್ತೆಯಾಗಿದೆ. ಚೈತ್ರಾಗೆ ಸೇರಿದ 1.8 ಕೋಟಿ ರೂಪಾಯಿ Fixed Depositನ್ನ ವಶಕ್ಕೆ ಪಡೆಯಲಾಗಿದೆ. ಇದರ ಜೊತೆಗೆ 65 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನೂ ಜಪ್ತಿ ಮಾಡಲಾಗಿದೆ. ಉಡುಪಿ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಪ್ಪೂರು ಕೋ ಆಪರೇಟಿವ್ ಸೊಸೈಟಿಯಲ್ಲಿನ ಜಂಟಿ ಖಾತೆಯೊಂದರಲ್ಲಿ ಇರಿಸಲಾಗಿದ್ದ 40 ಲಕ್ಷ ರೂಪಾಯಿಗಳನ್ನು ಸಹ ವಶಕ್ಕೆ ಪಡೆಯಲಾಗಿದೆ. ಈ ಸೊಸೈಟಿಯಲ್ಲಿ ಚೈತ್ರಾ – ಶ್ರೀಕಾಂತ್ ಅನ್ನೊ ಹೆಸರುಗಳಲ್ಲಿ ಈ ಜಂಟಿ ಖಾತೆ ತೆರೆಯಲಾಗಿತ್ತು. ಒಟ್ಟು ಎಲ್ಲಾ ಸೇರಿಸಿ ಸುಮಾರು 4 ಕೋಟಿ ರೂಪಾಯಿ ನಗದು ಪತ್ತೆಯಾಗಿದೆ. ಪೊಲೀಸರು ಜಪ್ತಿ ಮಾಡಿದ್ದಾರೆ. ಜೊತೆಗೆ ಬಾಗಲಕೋಟೆ ಜಿಲ್ಲೆ ಮುಧೋಳದ ಹಿಂದೂ ಕಾರ್ಯಕರ್ತ ಎನ್ನಲಾದ ಕಿರಣ್ ಗಣಪ್ಪಗೋಳ ಅನ್ನೋರ ಮನೆಯಲ್ಲಿ ಚೈತ್ರ ಕುಂದಾಪುರಗೆ ಸೇರಿದ ಕಿಯಾ ಕಾರು ಸಿಕ್ಕಿದ್ದು, ಆತನನ್ನ ಕೂಡ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇತ್ತ ಚೈತ್ರ ಅಂಡ್Read More →