PM ಮೋದಿಗೆ 73ರ ಹುಟ್ಟುಹಬ್ಬದ ಸಂಭ್ರಮ!

masthmagaa.com:

ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ 73ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಕೇಂದ್ರ ಮಂತ್ರಿಗಳಾದ ಅಮಿತ್‌ ಶಾ, ರಾಜನಾಥ್‌ ಸಿಂಗ್‌, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ಹಲವರು ಮೋದಿಯವರಿಗೆ ಶುಭಾಶಯ ಕೋರಿದ್ದಾರೆ. ಇತ್ತ ದೆಹಲಿಯ ದ್ವಾರಕಾದಲ್ಲಿ ಮೆಟ್ರೋ ವಿಸ್ತರಣೆಯ ಉದ್ಘಾಟನೆ ಮಾಡಲು ಮೆಟ್ರೋದಲ್ಲಿಯೇ ಮೋದಿ ತೆರಳಿದ್ದು, ಪ್ರಯಾಣಿಕರ ಜೊತೆ ಕೆಲ ಹೊತ್ತು ಸಂವಾದ ನಡೆಸಿದ್ದಾರೆ. ಬಳಿಕ ಯಶೋಭೂಮಿ ಕನ್ವೆನ್ಶನ್‌ ಹಾಲ್‌ ಹಾಗೂ ಮೆಟ್ರೋ ಸ್ಟೇಶನನ್ನ ಉದ್ಘಾಟನೆ ಮಾಡಿದ್ದಾರೆ. ಇನ್ನು ಇಂದು ವಿಶ್ವಕರ್ಮ ಜಯಂತಿ ಕೂಡ ಇರೋದ್ರಿಂದ ಪಿಎಂ ವಿಶ್ವಕರ್ಮ ಯೋಜನೆಗೆ ಚಾಲನೆ ನೀಡಿದ್ದಾರೆ. ಇನ್ನೊಂದ್‌ ಕಡೆ ಉತ್ತರ ಪ್ರದೇಶದ ವಾರಣಸಿಯ ಮುಸ್ಲಿಂ ಮಹಿಳೆಯರ ಗುಂಪೊಂದು 73 ದೀಪಗಳನ್ನ ಹಚ್ಚುವ ಮೂಲಕ ಮೋದಿಯವರ ಹುಟ್ಟುಹಬ್ಬ ಆಚರಿಸಿದ್ದಾರೆ. ರಂಗೋಲಿ ಮತ್ತು ಮೋದಿಯವರ ಫೋಟೊಗೆ ಲಡ್ಡು ಇಡುವ ಮೂಲಕ ಮುಸ್ಲಿಂ ಮಹಿಳಾ ಫೌಂಡೇಶನ್‌ನ( MMF) ಸದಸ್ಯ ಮಹಿಳೆಯರು ವಿಶೇಷವಾಗಿ ಆಚರಣೆ ಮಾಡಿದ್ದಾರೆ. ಜೊತೆಗೆ ಎಲ್ಲಾ ಕಡೆಯೂ ಮೋದಿ ಸರ್ಕಾರವಿರಬೇಕು ಎಂದು ಮುಸ್ಲಿಂ ಸಹೋದರಿಯರ ಕರೆ ನೀಡಬೇಕು ಅಂತ ಘೋಷಣೆಗಳನ್ನ ಕೂಗಿದ್ದಾರೆ. ಇದೇ ವೇಳೆ ಮುಸ್ಲಿಂ ಮಹಿಳೆಯರ ಹಕ್ಕುಗಳ ದಿನಕ್ಕಾಗಿ ಮೋದಿಯವರಿಗೆ ಧನ್ಯವಾದ ತಿಳಿಸಲು 10 ಸಾವಿರ ಮುಸ್ಲಿಂ ಮಹಿಳೆಯರು ಪತ್ರ ಬರೆಯುತ್ತೇವೆ ಅಂತ MMF ಹೇಳಿದೆ.

-masthmagaa.com

Contact Us for Advertisement

Leave a Reply