ಸದ್ಯ ಭಾರತಕ್ಕೆ ಬರಲ್ಲ ಎಂದ ಎಲಾನ್‌ ಮಸ್ಕ್‌ ಚೀನಾಗೆ ಭೇಟಿ!

masthmagaa.com:

ಇತ್ತೀಚೆಗಷ್ಟೇ…ʻಸದ್ಯಕ್ಕೆ ಭಾರತಕ್ಕೆ ಬರೋಕಾಗಲ್ಲ, ಟೆಸ್ಲಾಗೆ ಸಂಬಂಧಿಸಿ ಸಾಕಷ್ಟು ಕೆಲಸಗಳು ಬಂದಿವೆʼ ಅಂತೇಳಿ ಭಾರತದ ಭೇಟಿ ಕ್ಯಾನ್ಸಲ್‌ ಮಾಡಿದ ಎಲಾನ್‌ ಮಸ್ಕ್‌ ಇದೀಗ ದಿಢೀರ್‌ ಅಂತ ಚೀನಾಗೆ ಭೇಟಿ ನೀಡಿದ್ದಾರೆ. ಎಲೆಕ್ಟ್ರಿಕ್‌ ವಾಹನಗಳ ಎರಡನೇ ಅತೀದೊಡ್ಡ ಮಾರುಕಟ್ಟೆ ಹೊಂದಿರೋ ಚೀನಾಗೆ ಭೇಟಿ ನೀಡಿರೋದಾಗಿ ಅಲ್ಲಿನ ಮೀಡಿಯಾಗಳೇ ರಿಪೋರ್ಟ್‌ ಮಾಡಿವೆ. ʻʻಚೀನಾ ಕೌನ್ಸಿಲ್‌ ಫಾರ್‌ ದ ಪ್ರೊಮೋಷನ್‌ ಆಫ್‌ ಇಂಟರ್‌ನ್ಯಾಷನಲ್‌ ಟ್ರೇಡ್‌ ನೀಡಿರೋ ಆಹ್ವಾನದ ಮೇರೆಗೆ ಮಸ್ಕ್‌ ಭೇಟಿ ನೀಡಿದ್ದಾರೆ ಅಂತೇಳಲಾಗ್ತಿದೆ. ಅಂದ್ಹಾಗೆ ಏಪ್ರಿಲ್‌ 22ರಂದು ಎಲಾನ್‌ ಮಸ್ಕ್‌ ಭಾರತಕ್ಕೆ ಭೇಟಿ ನೀಡ್ತಾರೆ… ಪ್ರಧಾನಿ ಮೋದಿಯವ್ರೊಂದಿಗೆ ಮಾತುಕತೆ ನಡೆಸೋ ಪ್ಲಾನ್‌ ಹಾಕೊಂಡಿದ್ದಾರೆ. ಈ ವೇಳೆ ಇವಿ ಕಾರ್‌ಗಳ ಘಟಕ ನಿರ್ಮಾಣ ಕುರಿತು ಮಾತನಾಡ್ತಾರೆ ಅಂತೆಲ್ಲಾ ಹೇಳಲಾಗಿತ್ತು. ಆದ್ರೆ ಮಸ್ಕ್‌ ಅವ್ರು ಮಾತ್ರ..ಲಾಸ್ಟ್‌ ಮೊಮೆಂಟ್‌ಗೆ ಅರ್ಜೆಂಟ್‌ ಕೆಲಸ ಇದೆ ಅಂತೇಳಿ ಕ್ಯಾನ್ಸಲ್‌ ಮಾಡಿದ್ರು. ಈಗ ಚೀನಾಗೆ ಭೇಟಿ ನೀಡಿದ್ದಾರೆ ಅಂತ ಚೀನಾ ಮಾಧ್ಯಮಗಳು ವರದಿ ಮಾಡಿವೆ. ಈ ಬಗ್ಗೆ ಇದುವರೆಗೂ ಮಸ್ಕ್‌ರಿಂದ ಅಧಿಕೃತ ಪ್ರತಿಕ್ರಿಯೆ ಇಲ್ಲ.

-masthmagaa.com

Contact Us for Advertisement

Leave a Reply