ಇಸ್ರೇಲ್‌- ಹಮಾಸ್‌ ಭೀಕರ ಕಾಳಗ: 1000ಕ್ಕೂ ಹೆಚ್ಚು ಬಲಿ

masthmagaa.com:

ಯುದ್ದಗ್ರಸ್ಥ ಮಧ್ಯಪ್ರಾಚ್ಯದಲ್ಲಿ ಇಸ್ರೇಲ್‌ ಸೇನೆ-ಹಮಾಸ್‌ ಉಗ್ರರ ನಡುವಿನ ಭೀಕರ ಸಂಘರ್ಷ ಮುಂದುವರೆದಿದ್ದು ಇಸ್ರೇಲಿಗೆ ಇಸ್ರೇಲೆ ಯುದ್ಧ ಭೂಮಿಯಾಗಿದೆ. ದಾಳಿ-ಪ್ರತಿದಾಳಿಗೆ ಎರಡೂ ಬದಿಯ ಸುಮಾರು 1 ಸಾವಿರಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಹಠಾತ್‌ ದಾಳಿ ಮಾಡಿ ಇಸ್ರೇಲ್‌ನ್ನ
ಕೆರಳಿಸಿರುವ ಹಮಾಸ್‌ ಮೇಲೆ ಇಸ್ರೇಲ್‌ ಅತ್ಯುಗ್ರವಾಗಿ ದಾಳಿ ಮಾಡ್ತಿದೆ. ಇದೀಗ ಗಾಜಾ ಪಟ್ಟಿಯಲ್ಲಿ ಹಮಾಸ್‌ನ 3 ಅಡಗುದಾಣಗಳನ್ನ ದ್ವಂಸಗೊಳಿಸಲಾಗಿದೆ. ಇಲ್ಲಿ ಇನ್ನು ಹೆಚ್ಚಿನ ದಾಳಿಯನ್ನ ಮಾಡ್ತೇವೆ. ನಮ್ಮ ಟಾರ್ಗೆಟ್‌ಗಳು ಯಾವುದು ಅನ್ನೋ ಬಗ್ಗೆ ಇಂದು ಅಥ್ವಾ ನಾಳೆ ನಿರ್ಧರಿಸಲಾಗುತ್ತೆ ಅಂತ ಇಸ್ರೇಲ್‌ ಸೇನೆ ಹೇಳಿದೆ. ಇಸ್ರೇಲ್‌ ದಾಳಿಗೆ 400ಕ್ಕೂ ಹೆಚ್ಚು ಪ್ಯಾಲೆಸ್ತೇನಿಯರು ಸಾವನ್ನಪ್ಪಿದ್ದಾರೆ. ಅತ್ತ ಹಮಾಸ್‌ ಉಗ್ರ ದಾಳಿಯಲ್ಲಿ ಇಸ್ರೇಲ್‌ನಲ್ಲಿ ಮೃತಪಟ್ಟವರ ಸಂಖ್ಯೆ ಕೂಡ 400ಕ್ಕೆ ಏರಿಕೆಯಾಗಿದೆ. ಈ ದಾಳಿ ಮತ್ತು ಪ್ರತಿದಾಳಿಯಲ್ಲಿ ಎರಡೂ ಕಡೆಗಳಲ್ಲಿ ಒಟ್ಟು 1 ಸಾವಿರಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಇನ್ನು ಇಸ್ರೇಲ್‌ ಜನರ ಮೇಲಿನ ದೌರ್ಜನ್ಯಗಳ ಕುರಿತ ಒಂದೊಂದೇ ಮನಕಲುಕುವ ವಿಡಿಯೋಗಳು ಬೆಳಕಿಗೆ ಬರ್ತಿದ್ದು, ಬೆಚ್ಚಿ ಬೀಳಿಸುವಂತಿವೆ. ಇಸ್ರೇಲ್‌ನಲ್ಲಿ ಅಟ್ಟಹಾಸ ಪ್ರದರ್ಶಿಸುತ್ತಿರುವ ಹಮಾಸ್‌ ಉಗ್ರರು ಪೋಷಕರ ಎದುರೇ ಬಾಲಕಿಯೊಬ್ಬಳನ್ನ ಹತ್ಯೆ ಮಾಡಿರುವ ಘಟನೆ ನಡೆದಿದೆ. ಇನ್ನು ತಮ್ಮ ಜೊತೆ ಕೈಜೋಡಿಸುವಂತೆ ಹಮಾಸ್‌, ಲೆಬನಾನ್‌ ಸೇನೆಯನ್ನ ಕೇಳಿಕೊಂಡಿದೆ ಅಂತ ತಿಳಿದು ಬಂದಿದೆ. ಆದ್ರೆ ಲೆಬನಾನ್‌ನ ಉಗ್ರ ಸಂಘಟನೆ ಹಿಜ್ಬುಲ್ಲಾ ಮಾತ್ರ ತನ್ನ ಬಳಿ ಇರೋ ಬಂದೂಕು, ರಾಕೆಟ್‌ಗಳು ನಿಮಗೆ ಸೇರಿದ್ದು ಅಂತ ಹೇಳಿದೆ. ಇತ್ತ ಹಮಾಸ್‌ ಉಗ್ರರ ವಿರುದ್ಧದ ಹೋರಾಟಕ್ಕೆ ತಮ್ಮ ಜೊತೆ ಸೇರುವಂತೆ ಇಸ್ರೇಲ್‌ ಸೇನೆ ಅಲ್ಲಿನ ಜನರಿಗೆ ಕರೆ ನೀಡಿತ್ತು. ಈ ಹಿನ್ನಲೆಯಲ್ಲಿ ಮಾಜಿ ಪ್ರಧಾನಿ ನಫ್ತಾಲಿ ಬೆನೆಟ್‌ ಅವರು ಇಸ್ರೇಲ್‌ ಸೇನೆ ಸೇರಿಕೊಂಡಿದ್ದಾರೆ. ಇನ್ನು ಅತ್ತ ಗಾಜಾದಲ್ಲಿ ಆಗ್ತಿರೋ ಬೆಳವಣಿಗೆ ಸಂಬಂಧ, ರಷ್ಯಾ ಜೊತೆ ಮಾತಾಡೋದಕ್ಕೆ ಅರಬ್‌ ಲೀಗ್‌ನ ಮುಖ್ಯಸ್ಥ ಅಹ್ಮದ್‌ ಅಬೌಲ್‌ ಘೇಟ್‌ ಮಾಸ್ಕೋಗೆ ತೆರಳಿದ್ದಾರೆ. ಇನ್ನೊಂದ್‌ ಕಡೆ ಈಜಿಪ್ಟ್‌ನ ಅಲೆಕ್ಸಾಂಡ್ರಿಯಾ ಪ್ರವಾಸಿ ತಾಣದಲ್ಲಿ ಪೊಲೀಸ್‌ ಅಧಿಕಾರಿಯೊಬ್ಬರು ಇಬ್ಬರು ಇಸ್ರೇಲ್‌ ಪ್ರವಾಸಿಗರನ್ನ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಇನ್ನೊಂದ್‌ ಕಡೆ ಇಸ್ರೇಲ್‌ನಲ್ಲಿನ ಪರಿಸ್ಥಿತಿ ಹದಗೆಟ್ಟಿರೋ ಹಿನ್ನಲೆಯಲ್ಲಿ ಇಸ್ರೇಲ್‌ನ ರಾಜಧಾನಿ ಜೆರುಸೆಲಂನಿಂದ ದೆಹಲಿಗೆ ಹಾಗೂ ದೆಹಲಿಯಿಂದ ಜೆರುಸೆಲಂಗೆ ತೆರಳುವ ಏರ್‌ ಇಂಡಿಯಾ ವಿಮಾನಗಳ ಹಾರಾಟವನ್ನ ಸ್ಥಗಿತಗೊಳಿಸಲಾಗಿದೆ. ಅಕ್ಟೋಬರ್‌ 14ರವರೆಗೆ ಇಸ್ರೇಲ್‌ಗೆ ವಿಮಾನಗಳ ಹಾರಾಟವನ್ನ ರದ್ಧು ಮಾಡಿರೋದಾಗಿ ಏರ್‌ ಇಂಡಿಯಾ ಏರ್‌ಲೈನ್ಸ್‌ನ ವಕ್ತಾರರೊಬ್ಬರು ತಿಳಿಸಿದ್ದಾರೆ. ಇದೇ ವೇಳೆ ಇಸ್ರೇಲಿನಲ್ಲಿ ಸಿಲುಕಿದ್ದ 27 ಮೇಘಾಲಯದ ಜನರು ಸುರಕ್ಷಿತವಾಗಿ ಈಜಿಪ್ಟ್‌ಗೆ ಕ್ರಾಸ್‌ ಆಗಿದ್ದಾರೆ ಅಂತ ಮೇಘಾಲಯ ಸಿಎಂ ಹೇಳಿದ್ದಾರೆ. ಈ 27 ಜನರಲ್ಲಿ ರಾಜ್ಯಸಭಾ ಸಂಸದ ಖರ್ಲುಕಿ ಮತ್ತವರ ಕುಟುಂಬ ಇತ್ತು ಎನ್ನಲಾಗಿದೆ. ಇತ್ತ ಯುದ್ಧಪೀಡಿತ ಇಸ್ರೇಲ್‌ನಲ್ಲಿ ಸಿಲುಕಿದ್ದ ಬಾಲಿವುಡ್‌ ನಟಿ ನುಶ್ರತ್‌ ಭರುಚಾ ಅವರು ಸುರಕ್ಷಿತವಾಗಿ ಭಾರತಕ್ಕೆ ಆಗಮಿಸಿದ್ದಾರೆ. ಮತ್ತೊಂದ್‌ ಕಡೆ ಇಸ್ರೇಲ್‌ನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಹೆಲ್ಪ್‌ ಲೈನ್‌ ರಿಲೀಸ್‌ ಮಾಡಿದೆ. ಇತ್ತ ಇಸ್ರೇಲ್‌ ಮತ್ತು ಹಮಾಸ್‌ ಯುದ್ಧದ ಕುರಿತು ರಿಯಾಕ್ಟ್‌ ಮಾಡಿರುವ ಪೋಪ್‌ ಫ್ರಾನ್ಸಿಸ್‌, ಇಸ್ರೇಲ್‌ನಲ್ಲಿ ಹಿಂಸಾಚಾರವನ್ನ ಕೊನೆಗೊಳಿಸುವಂತೆ ಕರೆ ನೀಡಿದ್ದಾರೆ. ಯುದ್ಧ ಅಂದ್ರೆನೆ ಸೋಲು. ಹೀಗಾಗಿ ಇಸ್ರೇಲ್‌ ಹಾಗೂ ಪ್ಯಾಲಸ್ತೀನ್‌ನ ಶಾಂತಿಗಾಗಿ ಪ್ರಾರ್ಥಿಸೋಣ ಅಂತ ಹೇಳಿದ್ದಾರೆ.

 

-masthmagaa.com

Contact Us for Advertisement

Leave a Reply