ಇವಿಎಂ ವಿಚಾರ: ಸುಪ್ರೀಂಕೋರ್ಟ್‌ ನಿರ್ದೇಶನದಂತೆ ಸಜ್ಜಾಗ್ತಿರೊ EC!

masthmagaa.com:

ಇವಿಎಂಗಳನ್ನ ಹ್ಯಾಂಡಲ್‌ ಮಾಡೋ ವಿಚಾರವಾಗಿ ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಹೊಸ ಪ್ರೋಟೊಕಾಲ್‌ಗಳನ್ನ ಫಾಲೋ ಮಾಡಿ ಅಂತ ಕೇಂದ್ರ ಚುನಾವಣಾ ಆಯೋಗ ಎಲ್ಲಾ ರಾಜ್ಯಗಳ ಚುನಾವಣಾ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಅಲ್ದೇ ಇದಕ್ಕೆ ಬೇಕಾದ ಎಲ್ಲಾ ಅಗತ್ಯ ಸೌಕರ್ಯಗಳನ್ನ ರೆಡಿ ಮಾಡ್ಕೊಳ್ಳಿ ಅಂತೇಳಿದೆ. ಇತ್ತೀಚೆಗಷ್ಟೆ ಚುನಾವಣಾ ಫಲಿತಾಂಶ ಅನೌನ್ಸ್‌ ಆದ ಕನಿಷ್ಠ 45 ದಿನಗಳವರೆಗೆ ಇವಿಎಂ ಜೊತೆ ಸಿಂಬಲ್‌ ಲೋಡಿಂಗ್‌ ಯುನಿಟ್‌ಗಳು(SLU) ಸೀಲ್‌ ಮಾಡಿರೊ ಕಂಟೇನರ್‌ಗಳಲ್ಲಿ ಇರಬೇಕು ಅಂತೇಳಿ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿತ್ತು.

-masthmagaa.com

Contact Us for Advertisement

Leave a Reply