ಶಕ್ಸ್ಗಮ್‌ ಕಣಿವೆಯಲ್ಲಿ ಚೀನಾ ಚಟುವಟಿಕೆ ಖಂಡಿಸಿದ ಭಾರತ!

masthmagaa.com:

ಭಾರತ-ಚೀನಾ ಗಡಿಭಾಗದಲ್ಲಿರೋ ಶಕ್ಸ್ಗಮ್‌ ಕಣಿವೆಯಲ್ಲಿ ಹೆಚ್ಚಾಗ್ತಿರೋ ಚೀನಾ ಚಟುವಟಿಕೆಗಳನ್ನ ಇದೀಗ ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ʻನಾವು ಶಕ್ಸ್ಗಮ್‌ ಕಣಿವೆಯನ್ನ ನಮ್ಮ ಪ್ರದೇಶ ಅಂತ ಕನ್ಸಿಡರ್‌ ಮಾಡಿದ್ದೇವೆ. ಚೀನಾ ಮತ್ತು ಪಾಕಿಸ್ತಾನ ಸೇರಿ 1963ರಲ್ಲಿ ಮಾಡ್ಕೊಂಡಿರೋ ಗಡಿ ಒಪ್ಪಂದವನ್ನ ನಾವು ಎಂದಿಗೂ ಒಪ್ಪಿಕೊಂಡೇ ಇಲ್ಲ. ಈ ಪ್ರದೇಶವನ್ನ ಪಾಕಿಸ್ತಾನ ಚೀನಾಗೆ ಕಾನೂನುಬಾಹಿರವಾಗಿ ಬಿಟ್ಕೊಟ್ಟಿದೆ. ನಮ್ಮ ಹಿತಾಸಕ್ತಿಯ ರಕ್ಷಣೆಗಾಗಿ ಸೂಕ್ತ ಕ್ರಮಗಳನ್ನ ತೆಗೆದ್ಕೊಳ್ತೀವಿʼ ಅಂತ ಭಾರತ ಹೇಳಿದೆ. ಅಂದ್ಹಾಗೆ ಇತ್ತೀಚೆಗಷ್ಟೇ ಈ ಶಕ್ಸ್ಗಮ್‌ ಕಣಿವೆಯಲ್ಲಿ ಚೀನಾ ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡ್ತಿರೋ ಸ್ಯಾಟಲೈಟ್‌ ಇಮೇಜ್‌ ಹೊರಬಿದ್ದಿತ್ತು.

-masthmagaa.com

Contact Us for Advertisement

Leave a Reply