ಹಮಾಸ್‌ ಉಗ್ರ ಘೋಷಣೆ! ʼಇಸ್ರೇಲನ್ನೇ ಕಿತ್ತು ಬಿಸಾಕುತ್ತೇವೆ!ʼ

masthmagaa.com:

ಇಸ್ರೇಲ್‌- ಹಮಾಸ್‌ ನಡುವಿನ ಭೀಕರ ಸಂಘರ್ಷ 27ನೇ ದಿನಕ್ಕೆ ಕಾಲಿಟ್ಟಿದೆ. ಹಮಾಸ್‌ ಉಗ್ರರ ಅಡಗುದಾಣ ಗಾಜಾಪಟ್ಟಿಯಲ್ಲಿ ಇಸ್ರೇಲ್‌ ತನ್ನ ಕಾರ್ಯಾಚರಣೆಯನ್ನ ಮುಂದುವರೆಸಿದೆ. ಈ ನಡುವೆಯೇ ಹಮಾಸ್‌ ಮತ್ತೊಂದು ಉಗ್ರಘೋಷಣೆ ಮಾಡಿದೆ. ಅಕ್ಟೋಬರ್‌ 7ರಂದು ಇಸ್ರೇಲ್‌ ಮೇಲೆ ದಾಳಿ ನಡೆಸಿದ್ದ ರೀತಿಯಲ್ಲೇ ಮತ್ತೆ ಅದೇ ರೀತಿ ದಾಳಿ ನಡೆಸ್ತೀವಿ ಅಂತ ಹಮಾಸ್‌ ಹೇಳಿದೆ. ಈ ಬಗ್ಗೆ ಇಂಟರ್‌ವ್ಯೂ ಒಂದ್ರಲ್ಲಿ ಮಾತಾಡಿರುವ ಹಮಾಸ್‌ನ ಪೊಲಿಟಿಕಲ್‌ ಬ್ಯುರೋದ ಸದಸ್ಯ ಘಾಜಿ ಹಮಾದ್‌, ಇಸ್ರೇಲ್‌ ಮೇಲಿನ ನಮ್ಮ ʻಅಲ್‌ ಅಕ್ಸಾ ಫ್ಲಡ್‌ʼ ಕಾರ್ಯಾಚರಣೆ ಕೇವಲ ಮೊದಲ ಭಾಗವಾಗಿದ್ದು, ಮುಂದಿನ ದಿನಗಳಲ್ಲಿ ಇದರ ಮುಂದಿನ ಭಾಗವಾಗಿ ಸೆಕೆಂಡ್‌, ಥರ್ಡ್‌ ಹಾಗೂ ನಾಲ್ಕನೇ ದಾಳಿಗಳನ್ನ ಮಾಡ್ತೀವಿ ಅಂತ ಹೇಳಿದ್ದಾನ. ಜೊತೆಗೆ ನಮ್ಮ ಭೂ ಭಾಗದಲ್ಲಿ ಇಸ್ರೇಲ್‌ಗೆ ಜಾಗವಿಲ್ಲ. ಅದನ್ನ ನಾವು ಕಿತ್ತು ಒಗೆಯುತ್ತೇವೆ. ಅದಕ್ಕಾಗಿ ಹಮಾಸ್‌ ಯಾವ ರೀತಿಯ ಬೆಲೆ ತೆರೋದಕ್ಕೂ ಸಿದ್ಧವಾಗಿದೆ. ಯಾಕಂದ್ರೆ ನಮ್ಮನ್ನ ಹುತಾತ್ಮರ ರಾಷ್ಟ್ರ ಅಂತಾನೆ ಕರೆಯಲಾಗುತ್ತೆ. ನಾವು ಅದಕ್ಕಾಗಿ ನಮ್ಮ ಪ್ರಾಣ ಕೊಡೋಕೆ ಹೆಮ್ಮೆ ಪಡ್ತೀವಿ ಅಂತ ಘಾಜಿ ಅಬ್ಬರಿಸಿದ್ದಾನೆ. ಇನ್ನು ಈ ಇಸ್ರೇಲ್‌ ನಮ್ಮ ನೋವು, ರಕ್ತ ಮತ್ತು ಕಣ್ಣೀರಿಗೆ ಕಾರಣವಾಗಿದ್ದು, ಅದಕ್ಕೆ ನಾವು ತಕ್ಕ ಪಾಠ ಕಲಿಸುತ್ತೇವೆ. ಹೀಗಾಗಿ ಮತ್ತೆ ಮತ್ತೆ ಇಸ್ರೇಲ್‌ ಮೇಲೆ ದಾಳಿ ಮಾಡ್ತೀವಿ. ಅದು ಸಮರ್ಥನೀಯ ಕೂಡ ಹೌದು. ಈ ರೀತಿ ಹೇಳಿಕೊಳ್ಳೋಕೆ ನಮಗೆ ಯಾವುದೇ ಮುಜುಗರವಿಲ್ಲ ಅಂತ ಘಾಜಿ ಕಿಡಿಕಾರಿದ್ದಾನೆ.

ಇತ್ತ ಗಾಜಾ ಪಟ್ಟಿಯಲ್ಲಿ ಇಸ್ರೇಲ್‌ ನಡೆಸುತ್ತಿರೋ ದಾಳಿಯನ್ನ ಕೂಡಲೇ ನಿಲ್ಲಿಸಬೇಕು ಅಂತ ಇರಾನ್‌ ಸುಪ್ರೀಂ ಲೀಡರ್‌ ಅಯಾತುಲ್ಲಾಹ್‌ ಅಲಿ ಖಮೇನಿ ಆಗ್ರಹಿಸಿದ್ದಾರೆ. ಜೊತೆಗೆ ತೈಲ ಮತ್ತು ಆಹಾರವನ್ನ ಇಸ್ರೇಲ್‌ಗೆ ರಫು ಮಾಡದಂತೆ ಮುಸ್ಲಿಂ ರಾಷ್ಟ್ರಗಳಿಗೆ ಕರೆಕೊಟ್ಟಿದ್ದಾರೆ.
ಇನ್ನೊಂದ್‌ ಕಡೆ ಗಾಜಾದಲ್ಲಿನ ಜಬಾಲಿಯಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 195ಕ್ಕೆ ಏರಿಕೆಯಾಗಿದೆ. 120 ಜನ ನಾಪತ್ತೆಯಾಗಿದ್ದು, 700ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ ಅಂತ ಹಮಾಸ್‌ ಹೇಳಿದೆ. ಆದ್ರೆ ಜಬಾಲಿಯಾ ಕ್ಯಾಂಪ್‌ ನಿರಾಶ್ರಿತರ ಕ್ಯಾಂಪ್‌ ಅಲ್ಲ ಅಂತ ಇಸ್ರೇಲ್‌ ಹೇಳಿದೆ. ಜಬಾಲಿಯಾ ಪ್ಯಾಲಸ್ತೈನ್‌ ಆಡಳಿತದಡಿಯಲ್ಲಿ ಬರುವ ಪ್ಯಾಲಸ್ತೀನಿಯರ ಪರ್ಮನೆಂಟ್‌ ರೆಸಿಡೆನ್ಶಿಯಲ್‌ ಬಿಲ್ಡಿಂಗ್‌ ಆಗಿದ್ದು, ಅಲ್ಲಿ ಯಾವುದೇ ನಿರಾಶ್ರಿತರು ಇರ್ಲಿಲ್ಲ. ನಮ್ಮ ಏರ್‌ಸ್ಟ್ರೈಕ್‌ನಲ್ಲಿ ಜಬಾಲಿಯಾದಲ್ಲಿದ್ದ ಇಬ್ಬರು ಹಮಾಸ್‌ ಕಮಾಂಡರ್‌ಗಳನ್ನ ಹೊಡೆದುರುಳಿಸಲಾಗಿದೆ ಅಂತ ಇಸ್ರೇಲ್‌ ಸೇನೆ ವಕ್ತಾರ, ಜೋನಾಥನ್‌ ಕಾನ್ಕ್ರಿಕಸ್‌ ತಿಳಿಸಿದ್ದಾರೆ.
ಮತ್ತೊಂದ್‌ ಕಡೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌, ಪ್ಯಾಲಸ್ತೈನ್‌ಗೆ ಸಂಪೂರ್ಣವಾಗಿ ಸಪೋರ್ಟ್‌ ಮಾಡುವಂತೆ ತನ್ನ ಅಧಿಕಾರಿಗಳಿಗೆ ಆದೇಶ ಕೊಟ್ಟಿದ್ದಾರೆ ಅಂತ ದಕ್ಷಿಣ ಕೊರಿಯಾದ ಗುಪ್ತಚರ ಮಾಹಿತಿ ಉಲ್ಲೇಖಿಸಿ ವಾಲ್‌ ಸ್ಟ್ರೀಟ್‌ ಜರ್ನಲ್‌ ವರದಿ ಮಾಡಿದೆ. ಜೊತೆಗೆ ಪಾಶ್ಚಿಮಾತ್ಯ ದೇಶಗಳಲ್ಲಿರೋ ಭಯೋತ್ಪಾದಕ ಸಂಘಟನೆಗಳಿಗೆ ಶಸ್ತ್ರಾಸ್ತ್ರ ಮಾರಾಟದ ಬಗ್ಗೆ ಯೋಚಿಸುತ್ತಿದ್ದಾರೆ ಅಂತ ವರದಿಯಲ್ಲಿ ಹೇಳಲಾಗಿದೆ. ಅಂದ್ಹಾಗೆ ಇತ್ತೀಚೆಗೆ ಹಮಾಸ್‌ ಉಗ್ರರಿಂದ ಇಸ್ರೇಲ್‌ ವಶಪಡಿಸಿಕೊಂಡಿದ್ದ ಶಸ್ತ್ರಾಸ್ತ್ರಗಳಲ್ಲಿ ಉತ್ತರ ಕೊರಿಯಾದ ಶಸ್ತ್ರಗಳಿರೋದು ಕಂಡು ಬಂದಿತ್ತು.) ಆಗ ಅಮೆರಿಕ ಕೂಡ ಉತ್ತರ ಕೊರಿಯಾ ಹಮಾಸ್‌ ಉಗ್ರರಿಗೆ ಶಸ್ತ್ರಾಸ್ತ್ರ ಪೂರೈಕೆ ಮಾಡ್ತಿದೆ ಅಂತ ಆರೋಪಿಸಿತ್ತು. ಆದ್ರೆ ಈ ಆರೋಪವನ್ನ ಉತ್ತರ ಕೊರಿಯಾ ಬೇಸ್‌ಲೆಸ್‌ ಹಾಗೂ ಫೇಕ್‌ ರೂಮರ್‌ ಅಂತ ತಳ್ಳಿಹಾಕಿತ್ತು.

ಇತ್ತ ಅಮೆರಿಕ, ಹಮಾಸ್‌ ಬಗ್ಗೆ ದೊಡ್ಡ ಸ್ಟೇಟ್‌ಮೆಂಟ್‌ ಕೊಟ್ಟಿದೆ. ಭವಿಷ್ಯದಲ್ಲಿ ಹಮಾಸ್‌ ಉಗ್ರ ಸಂಘಟನೆ ಗಾಜಾಪಟ್ಟಿಯ ಆಡಳಿತ ನಡೆಸುತ್ತೆ ಅಂತ ನಮಗೆ ಅನ್ನಿಸೋದಿಲ್ಲ. ಅದು ಸಾಧ್ಯನೂ ಇಲ್ಲ ಅಂತ ಅಮೆರಿಕದ ನ್ಯಾಷನಲ್‌ ಸೆಕ್ಯುರಿಟಿ ಕೌನ್ಸಿಲ್‌ ವಕ್ತಾರ ಜಾನ್‌ ಕಿರ್ಬಿ ಹೇಳಿದ್ದಾರೆ. ಇದೇ ವೇಳೆ ಯುದ್ಧದ ಬಳಿಕ ಏನಾಗ್ಬೋದು ಅನ್ನೋದಕ್ಕೆ ನಮ್ಮ ಬಳಿ ಈಗಲೇ ಉತ್ತರವಿಲ್ಲ. ಆದ್ರೆ ಗಾಜಾದಲ್ಲಿ ಯಾರು ಮತ್ತು ಯಾವ ರೀತಿ ಆಡಳಿತವಿರ್ಬೇಕು ಅನ್ನೋದ್ರ ಕುರಿತು ಆ ಭಾಗದ ನಮ್ಮ ಮಿತ್ರರಾಷ್ಟ್ರಗಳ ಜೊತೆಯಲ್ಲಿ ಕೆಲಸ ಮಾಡ್ತಿದಿವಿ ಅಂತ ಅಮೆರಿಕ ತಿಳಿಸಿದೆ. ಆ ಮೂಲಕ ಪರೋಕ್ಷವಾಗಿ ಗಾಜಾ ಸಂಪೂರ್ಣವಾಗಿ ಹಮಾಸ್‌ ಮುಕ್ತವಾಗಬೋದು ಅಥವಾ ಅದು ಇಸ್ರೇಲ್‌ನ ಆಡಳಿತಕ್ಕೆ ಒಳಪಡಬೋದು ಅನ್ನೋ ಅರ್ಥದಲ್ಲಿ ಅಮೆರಿಕ ಹೇಳಿದೆ.

-masthmagaa.com

Contact Us for Advertisement

Leave a Reply