ಕರ್ನಾಟಕಕ್ಕೆ GST ಪರಿಹಾರ ಬಿಡುಗಡೆಗೆ ಸೂಚಿಸಿದ ನಿರ್ಮಲಾ ಸೀತಾರಾಮನ್‌!

masthmagaa.com:

ಕರ್ನಾಟಕಕ್ಕೆ ನೀಡಬೇಕಾದ ಜಿಎಸ್‌ಟಿ ಪರಿಹಾರ ಬಿಡುಗಡೆ ಮಾಡಿ ಅಂತ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ನಿನ್ನೆ ದೆಹಲಿಯಲ್ಲಿ ನಡೆದ 52ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ರಾಜ್ಯಕ್ಕೆ ನೀಡಬೇಕಾದ 2,333 ಕೋಟಿ ರೂಪಾಯಿಗಳ ಜಿಎಸ್‌ಟಿ ಪರಿಹಾರವನ್ನು ಬಿಡುಗಡೆ ಮಾಡುವ ವಿಷಯವನ್ನು ಪ್ರಸ್ತಾಪ ಮಾಡಲಾಗಿದೆ. ಈ ವೇಳೆ ಶೀಘ್ರದಲ್ಲೇ ಬಿಡುಗಡೆ ಮಾಡುವಂತೆ ನಿರ್ಮಲಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಅಂತ ಸಿಎಂ ಸಿದ್ದರಾಮಯ್ಯನವರನ್ನ ಪ್ರತಿನಿಧಿಸಿದ್ದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ಜೊತೆಗೆ “ನಮ್ಮ ಕೋರಿಕೆಯ ಮೇರೆಗೆ, ಲೇಬಲ್ ಮಾಡದ ರಾಗಿ ಮಿಶ್ರಣಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗಿದೆ. ಲೇಬಲ್ ಮಾಡಿದ ರಾಗಿ ಮಿಶ್ರಣಗಳು 12 ರಿಂದ 18%ರ ಬದಲಿಗೆ 5% ಜಿಎಸ್‌ಟಿ ವಿಧಿಸಲಾಗಿದೆ. ಅಂತೆಯೇ GST ಕೌನ್ಸಿಲ್ ಪುಡಿ ರೂಪದಲ್ಲಿ ರಾಗಿ ಹಿಟ್ಟಿನ ಆಹಾರ ತಯಾರಿಕೆಗೆ ಶೂನ್ಯ ದರವನ್ನು ಶಿಫಾರಸು ಮಾಡಿದೆ ಮತ್ತು ಸಡಿಲ ರೂಪದಲ್ಲಿ ಮಾರಾಟ ಮಾಡುವಾಗ ತೂಕದಲ್ಲಿ ಕನಿಷ್ಠ 70% ರಾಗಿ ಹೊಂದಿರಬೇಕು ಮತ್ತು ಮೊದಲೇ ಪ್ಯಾಕ್‌ ಮಾಡಲಾಗಿದ್ದು, ಲೇಬಲ್ ರೂಪದಲ್ಲಿ ಮಾರಾಟ ಮಾಡಿದರೆ 5% ಜಿಎಸ್‌ಟಿ ಇರಲಿದೆ ಅಂತ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply