ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ: 2000 ಜನ ಬಲಿ!

masthmagaa.com:

ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, 2 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟು 9 ಸಾವಿರಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಅಫ್ಘಾನಿಸ್ತಾನದ ಹೆರಾತ್‌ ಪ್ರಾತ್ಯಂತದಲ್ಲಿ ಈ ಭೀಕರ ಭೂಕಂಪ ಸಂಭವಿಸಿದ್ದು, ರಿಕ್ಟರ್‌ ಸ್ಕೇಲ್‌ನಲ್ಲಿ 6.3 ತೀವ್ರತೆ ದಾಖಲಾಗಿದೆ. ಈ ಭೂಕಂಪದಿಂದ ಅಫ್ಘಾನಿಸ್ತಾನ 12 ಹಳ್ಳಿಗಳು ಸಂಪೂರ್ಣವಾಗಿ ನಾಶವಾಗಿದ್ದು, ಸುಮಾರು 1,328 ಮನೆಗಳು ನೆಲಸಮಗೊಂಡಿವೆ ಅಂತ ಅಲ್ಲಿನ ಡಿಸಾಸ್ಟರ್‌ ಸಚಿವಾಲಯ ಹೇಳಿದೆ. ರಕ್ಷಣಾ ಕಾರ್ಯಾಚರಣೆ ನಡೆಸಲಾಗ್ತಿದೆ. ಇನ್ನು ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಹಲವರು ಸಿಲುಕಿದ್ದು, ಸಾವನ್ನಪ್ಪಿದವರ ಸಂಖ್ಯೆಯಲ್ಲಿ ಏರಿಕೆಯಾಗಿವ ಸಾಧ್ಯತೆಯಿದೆ ಅಂತ ತಿಳಿಸಲಾಗಿದೆ. ಭೂಕಂಪದಿಂದ ಭಯಭೀತರಾಗಿರುವ ಜನರು ಆತಂಕದಿಂದ ರಸ್ತೆ ಹಾಗೂ ಬಯಲು ಪ್ರದೇಶಕ್ಕೆ ಓಡಿ ಬಂದು ತಮ್ಮ ಜೀವ ಕಾಪಾಡಿಕೊಂಡಿದ್ದಾರೆ. ಇನ್ನು ಗಾಯಾಳುಗಳನ್ನ ವಿವಿಧ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗುತ್ತಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ದುರಂತದ ದೃಶ್ಯಗಳನ್ನು ವಿಡಿಯೋದಲ್ಲಿ ನೋಡಿದ್ರೆ ಭೂಕಂಪದಿಂದ ಅಫ್ಘಾನ್​ನಲ್ಲಿ ದೊಡ್ಡ ಮಾರಾಣಹೋಮವೇ ನಡೆದಂತೆ ಆಗಿದೆ. ಅಂದ್ಹಾಗೆ ಕಳೆದ ವರ್ಷ ಜೂನ್‌ನಲ್ಲಿ ಕೂಡ ಅಫ್ಘಾನ್‌ನಲ್ಲಿ ಭೀಕರ ಭೂಕಂಪ ಆಗಿ ಆಗಲೂ ಸುಮಾರು 1 ಸಾವಿರ ಜನ ಸಾವನ್ನಪ್ಪಿದ್ರು.

-masthmagaa.com

Contact Us for Advertisement

Leave a Reply