ಅದಾನಿ ಆಸ್ತಿಯಲ್ಲಿ ವಿಪರೀತ ಏರಿಕೆ!

masthmagaa.com:

ಅದಾನಿ ಗ್ರೂಪ್​​ನ ಚೇರ್​ಮನ್ ಗೌತಮ್ ಅದಾನಿ ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದ್ದಾರೆ. ಅವರ ಸಂಪತ್ತಿನ ಓಟ ಹೀಗೆ ಮುಂದುವರಿದ್ರೆ ಇನ್ನು ಕೆಲವೇ ದಿನಗಳಲ್ಲಿ ಏಷ್ಯಾದ ನಂಬರ್ 1 ಶ್ರೀಮಂತ ಮುಖೇಶ್​​ ಅಂಬಾನಿಯನ್ನೂ ಹಿಂದಿಕ್ಕಲಿದ್ದಾರೆ ಅಂತ ಅಂದಾಜಿಸಲಾಗಿದೆ. ಬ್ಲೂಂಬರ್ಗ್​​​​ ಬಿಲಿಯನೇರ್ ಇಂಡೆಕ್ಸ್ ಪ್ರಕಾರ, ಅದಾನಿ ಒಟ್ಟು ಆಸ್ತಿ 4.93 ಲಕ್ಷ ಕೋಟಿ ರೂಪಾಯಿಯಷ್ಟಿದೆ. ಗುಜರಾತ್​​ನ ರತನ್​​ಪೋಲ್​​​ನಲ್ಲಿ 1962ರಲ್ಲಿ ಜನಿಸಿದ್ದ ಗೌತಮ್ ಅದಾನಿ, ಶಿಕ್ಷಣ ಪೂರ್ಣಗೊಳಿಸದೇ 16ನೇ ವಯಸ್ಸಿನಲ್ಲಿ ಮುಂಬೈಗೆ ಬಂದಿದ್ರು. ನಂತರ ವಜ್ರದ ಉದ್ಯಮದಲ್ಲಿ ತೊಡಗಿಸಿಕೊಂಡು ಅದಾನಿ ಕೋಟೆ ಕಟ್ಟಿದ್ದಾರೆ.

-masthmagaa.com

Contact Us for Advertisement

Leave a Reply