masthmagaa.com:

ಇನ್ನು ದೇಶದ ವಿಚಾರಕ್ಕೆ ಬಂದ್ರೆ ಕಳೆದ 24 ಗಂಟೆಗಳಲ್ಲಿ 41,965 ಜನರಿಗೆ ಹೊಸದಾಗಿ ಕೊರೋನಾ ಸೋಂಕು ದೃಢಪಟ್ಟಿದ್ದು. 460 ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 3 ಕೋಟಿ 28 ಲಕ್ಷದ 10 ಸಾವಿರ ದಾಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 4,39,020 ಆಗಿದೆ.

ಕಳೆದ 24 ಗಂಟೆಗಳಲ್ಲಿ 33,964 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 3 ಕೋಟಿ 19 ಲಕ್ಷದ 93 ಸಾವಿರ ದಾಟಿದೆ. ದೇಶದಲ್ಲಿ ಇನ್ನೂ ಕೂಡ 3 ಲಕ್ಷದ 78 ಸಾವಿರಕ್ಕೂ ಹೆಚ್ಚು ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಭಾರತದಲ್ಲಿ ಗುಣಮುಖ ಪ್ರಮಾಣ 97.51 ಪರ್ಸೆಂಟ್ ಇದ್ದು, ಸಾವಿನ ಪ್ರಮಾಣ 1.34 ಪರ್ಸೆಂಟ್ ಇದೆ. ದೇಶದಲ್ಲಿ ನಿನ್ನೆ 16.06 ಲಕ್ಷ ಪರೀಕ್ಷೆಗಳನ್ನ ನಡೆಸಲಾಗಿದ್ದು, ಇದುವರೆಗೆ ಒಟ್ಟು 52.31 ಕೋಟಿ ಟೆಸ್ಟ್​ಗಳನ್ನ ನಡೆಸಿದಂತಾಗಿದೆ.

ದೇಶದಲ್ಲಿ ನಿನ್ನೆ 1.33 ಕೋಟಿಗೂ ಹೆಚ್ಚು ಡೋಸ್ ಕೊರೋನಾ ಲಸಿಕೆ ಹಾಕಲಾಗಿದ್ದು, ಇದುವರೆಗೆ ಒಟ್ಟು 65.41 ಕೋಟಿಗೂ ಅಧಿಕ ಡೋಸ್ ಲಸಿಕೆ ಹಾಕಿದಂತಾಗಿದೆ.

-masthmagaa.com

Contact Us for Advertisement

Leave a Reply