ಡೆಲ್ಟಾ ಪ್ಲಸ್ ವೈರಸ್ ತಡೆಯುವಲ್ಲಿ ಲಸಿಕೆ ಪರಿಣಾಮಕಾರಿನಾ?

masthmagaa.com:

ಇಷ್ಟು ದಿನ ಡೆಲ್ಟಾ ರೂಪ ಧರಿಸಿಕೊಂಡು ಓಡಾಡ್ತಿದ್ದ ಕೊರೋನಾ ಈಗ ಡೆಲ್ಟಾ ಪ್ಲಸ್ ವೇಷದಲ್ಲಿ ಹಾವಳಿ ಶುರು ಮಾಡ್ಕೊಂಡಿದೆ. ಇವತ್ತು ಐಸಿಎಂಆರ್ ಡೆರೆಕ್ಟರ್ ಜನರಲ್ ಬಲರಾಂ ಭಾರ್ಗವ ಕೂಡ ಸುದ್ದಿಗೋಷ್ಠಿ ವೇಳೆ ಈ ಬಗ್ಗೆ ಮಾತನಾಡಿದ್ರು. ಈಗಾಗಲೇ 11 ರಾಜ್ಯಗಳಿಗೆ ಹರಡಿದ್ದು, 48 ಮಂದಿಯಲ್ಲಿ ಪತ್ತೆಯಾಗಿದೆ. ಮಹತ್ವದ ವಿಚಾರ ಅಂದ್ರೆ ಈ ವೈರಾಣು ಕೆಲವೊಂದು ಸ್ಥಳಗಳಿಗೆ ಸೀಮಿತವಾಗಿದೆ ಅಂತ ಹೇಳಿದ್ರು. ಇನ್ನು ಕೋವಿಶೀಲ್ಡ್​ ಮತ್ತು ಕೋವ್ಯಾಕ್ಸಿನ್ ಆಲ್ಫ, ಬೀಟಾ, ಗಾಮಾ ಮತ್ತು ಡೆಲ್ಟಾ ವಿರುದ್ಧ ಪರಿಣಾಮಕಾರಿಯಾಗಿದೆ. ಆದ್ರೆ ಡೆಲ್ಟಾಪ್ಲಸ್​​ಗೆ ವ್ಯಾಕ್ಸಿನ್ ಪರಿಣಾಮಕಾರಿನಾ ಇಲ್ವಾ ಅನ್ನೋದರ ಬಗ್ಗೆ ಮುಂದಿನ 7ರಿಂದ 10 ದಿನಗಳಲ್ಲಿ ಗೊತ್ತಾಗುತ್ತೆ ಅಂತ ಹೇಳಿದ್ದಾರೆ. ಮಧ್ಯಪ್ರದೇಶದಲ್ಲಿ ಈಗಾಗಲೇ 7 ಮಂದಿಯಲ್ಲಿ ಡೆಲ್ಟಾ ಪ್ಲಸ್ ವೈರಾಣು ಪತ್ತೆಯಾಗಿದ್ದು, ಇಬ್ಬರು ಜೀವ ಬಿಟ್ಟಿದ್ದಾರೆ. ಉಳಿದ ಮೂವರು ಒಂದು ಅಥವಾ ಎರಡು ಡೋಸ್ ಲಸಿಕೆ ಪಡೆದಿದ್ದು, ಕೆಲವರು ಗುಣಮುಖರಾಗಿದ್ದಾರೆ. ಇನ್ನುಳಿದಂತೆ ಇಬ್ಬರು ಯಾವುದೇ ಲಸಿಕೆ ಪಡೆದಿಲ್ಲವಾದ್ರೂ ಗುಣಮುಖರಾಗಿದ್ದಾರೆ. ಅದ್ರಲ್ಲಿ ಒಬ್ರು 22 ವರ್ಷದ ಯುವತಿ.. ಮತ್ತೊಂದು 2 ವರ್ಷದ ಮಗು ಕೂಡ ಸೇರಿದೆ. ಇನ್ನು ಮಹಾರಾಷ್ಟ್ರದಲ್ಲಿ ಈವರೆಗೆ 21 ಮಂದಿಯಲ್ಲಿ ಡೆಲ್ಟಾ ಪ್ಲಸ್ ಪತ್ತೆಯಾಗಿದ್ದು, ಒಬ್ಬರು ಪ್ರಾಣ ಕಳ್ಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply