ಲೇಡಿ ಗಾಗಾರ ಹೈ ಪ್ರೊಫೈಲ್​ ನಾಯಿ ಕಳ್ಳತನ ಕೇಸ್: ಮಹಿಳೆ ಸೇರಿ 5 ಜನ ಅರೆಸ್ಟ್

masthmagaa.com:

ಮ್ಯೂಸಿಕ್ ಸೂಪರ್​ಸ್ಟಾರ್ ಮತ್ತು ಹಾಲಿವುಡ್​ ನಟಿ ಲೇಡಿ ಗಾಗಾ ಅವರ ಎರಡು ದುಬಾರಿ ನಾಯಿಗಳ ಕಳ್ಳತನ ಪ್ರಕರಣದಲ್ಲಿ ಐವರನ್ನ ಅಮೆರಿಕದ ಲಾಸ್ ಏಂಜಲೀಸ್ ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಅಂದ್ಹಾಗೆ ಲೇಡಿ ಗಾಗಾ ಅವರ 3 ನಾಯಿಗಳನ್ನ ಅವರ ಸಿಬ್ಬಂದಿಯೊಬ್ಬರು ವಾಕ್​ಗೆ ಅಂತ ಕರ್ಕೊಂಡ್​ ಹೋಗಿದ್ರು. ಈ ವೇಳೆ ಕಾರಿನಲ್ಲಿ ಬಂದ ಕಿಡಿಗೇಡಿಗಳು ಡಾಗ್ ವಾಕರ್ ಮೇಲೆ ಗುಂಡು ಹಾರಿಸಿ, ಮೂರು ನಾಯಿಗಳ ಪೈಕಿ ಎರಡು ನಾಯಿಯನ್ನ ಎತ್ಕೊಂಡ್​ ಹೋಗಿದ್ರು. ಇದಾದ ಬಳಿಕ ನಾಯಿಯನ್ನ ಹುಡುಕಿ ಕೊಟ್ಟವರಿಗೆ 5 ಲಕ್ಷ ಡಾಲರ್ ದುಡ್ಡು ಕೊಡೋದಾಗಿ ಲೇಡಿ ಗಾಗಾ ಘೋಷಿಸಿದ್ರು. ಅದಾಗಿ ಎರಡೇ ದಿನದಲ್ಲಿ ಮಹಿಳೆಯೊಬ್ಬಳು ​ಆ ನಾಯಿಗಳನ್ನ ತಂದು ಲೇಡಿ ಗಾಗಾಗೆ ಕೊಟ್ಟಿದ್ರು. ಇದೀಗ ಆ ಮಹಿಳೆ ಮತ್ತು ಇತರ ನಾಲ್ವರನ್ನ ಪೊಲೀಸರು ಬಂಧಿಸಿದ್ದಾರೆ. ತಾವು ಕದಿಯುತ್ತಿದ್ದ ನಾಯಿಗಳು ಲೇಡಿ ಗಾಗಾಗೆ ಸೇರಿದ್ದು ಅನ್ನೋದು ಕಳ್ಳರಿಗೆ ಗೊತ್ತಿರಲಿಲ್ಲ ಅಂತ ಪೊಲೀಸರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply