masthmagaa.com:

ರಮೇಶ್​ ಜಾರಕಿಹೊಳಿ ಕಾಮ ಪುರಾಣ ಬಹಿರಂಗವಾದ ಬೆನ್ನಲ್ಲೇ ಇನ್ನೂ ಕೆಲ ರಾಜಕಾರಣಿಗಳ CDಗಳು ಹೊರಬರಲಿದೆ ಅನ್ನೋ ಮಾತುಗಳು ಕೇಳಿ ಬರ್ತಿವೆ. ಈ ಬಗ್ಗೆ ಮಾತನಾಡಿದ ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ, ‘ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ₹5 ಕೋಟಿ ಡೀಲ್ ಆಗಿದೆ ಅನ್ನೋದು ನನ್ನ ಗಮನಕ್ಕೆ ಬಂದಿದೆ. ಕಳೆದ 3 ತಿಂಗಳಿಂದ ಈ‌ ಡೀಲ್ ನಡೆದಿದೆ. ದೊಡ್ಡ ದೊಡ್ಡವರೇ ಈ ಪ್ರಕರಣದಲ್ಲಿ ಇದ್ದಾರೆ. ಇದನ್ನ ತನಿಖೆ ಮಾಡಿಸುವ ಜವಬ್ದಾರಿ ಸರ್ಕಾರದ್ದು. ಇನ್ನು ರಾಜಕಾರಣಿಗಳ ಸಿಡಿ ಇದೆ ಅಂತ ಬ್ಲಾಕ್​ಮೇಲ್​ ಮಾಡೋರನ್ನ ಅರೆಸ್ಟ್ ಮಾಡಿ, ಏರೋಪ್ಲೇನ್ ಹತ್ತಿಸಬೇಕು. ಅದ್ಯಾರೋ ಒಬ್ಬ ಮಾಜಿ ಸಿಎಂ ಅದೆಲ್ಲಿಗೋ ಹೋಗಿ ಬರ್ತಾರೆ ಅಂತ ಹೇಳಿದ್ದಾನೆ. ರಾಜ್ಯದಲ್ಲಿ ದೇವೇಗೌಡ, ಎಸ್.‌ಎಂ. ಕೃಷ್ಣ ಸೇರಿ ತುಂಬಾ ಜನ ಮಾಜಿ ಸಿಎಂಗಳಿದ್ದಾರೆ. ಯಾರು ಆ ಮಾಜಿ ಸಿಎಂ ಅಂತ ಬಾಯಿ ಬಿಡಿಸಿ. ಸುಮ್ಮನೆ ನಾವು ಹೊರಗೆ ಓಡಾಡುವಾಗ ಮುಜುಗರ ತರಬೇಡಿ. ಇನ್ನೂ 3-4 ಕ್ಯಾಸೆಟ್​ ಇದೆ ಅಂತಿದ್ದಾನೆ. ಇದನ್ನೆಲ್ಲಾ ಅವನೇ ಮಾಡಿಸುತ್ತಿದ್ದಾನೆಯೇ ಅಥವಾ ಅವನ ಮೂಲಕ ಇನ್ಯಾರೋ ಮಾಡ್ತಿದ್ದಾರೋ ಅನ್ನೋದು ಗೊತ್ತಾಗಬೇಕು. ತನಿಖೆ ನಡೆಸಿ ಅದನ್ನ ರಾಜ್ಯದ ಜನರ ಮುಂದಿಡಬೇಕು. ರಮೇಶ್​ ಜಾರಕಿಹೊಳಿಯಿಂದ ರಾಜೀನಾಮೆ ತೆಗೆದುಕೊಳ್ಳಬೇಕು ಅಂತಿತ್ತು. ಹೀಗಾಗಿ ಈ ನಾಟಕ ಮಾಡಿದ್ದಾರೆ’ ಅಂತ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಇನ್ನು ರಮೇಶ್ ಜಾರಕಿಹೊಳಿ ಅವರ ಆಪ್ತ ಮಹೇಶ್ ಕುಮಟಳ್ಳಿ ಮಾತನಾಡಿ, ‘ನಾನು ಕೂಡ ವಾಟ್ಸಾಪ್​ನಲ್ಲಿ ವಿಡಿಯೋ ನೋಡಿದ್ದೀನಿ. ಅಸಲಿಗೆ ರಮೇಶ್ ಜಾರಕಿಹೊಳಿ ಮುಖದಲ್ಲಿ ಒಂದು ಮಚ್ಚೆ ಇದೆ. ಆದ್ರೆ ವಿಡಿಯೋದಲ್ಲಿ ಆ ಮಚ್ಚೆ ಕಾಣ್ತಿಲ್ಲ. ಹೀಗಾಗಿ ಇದು ಎಡಿಟ್ ಮಾಡಿದಂತೆ ಕಾಣ್ತಿದೆ’ ಎಂದಿದ್ದಾರೆ.

-masthmagaa.com

Contact Us for Advertisement

Leave a Reply