ಕಳೆದ 20 ವರ್ಷದಲ್ಲಿ 5 ಪಿಡುಗುಗಳನ್ನ ವಿಶ್ವಕ್ಕೆ ಕೊಟ್ಟ ಚೀನಾ..!

masthmagaa.com:

ಕಳೆದ 20 ವರ್ಷಗಳಲ್ಲಿ ಚೀನಾದಿಂದ 5 ಪಿಡುಗುಗಳು ಹೊರಬಂದಿವೆ. ಇವುಗಳನ್ನ ನಿಲ್ಲಿಸಲೇಬೇಕಾಗಿದೆ ಅಂತ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್​ ಒಬ್ರಿಯೆನ್ ಹೇಳಿದ್ದಾರೆ. ಜೊತೆಗೆ ಇನ್ಮುಂದೆ ಇಂತಹ ಪಿಡುಗುಗಳು ಚೀನಾದಿಂದ ಹೊರಬರಲು ಬಿಡುವುದಿಲ್ಲ ಅಂತ ಚೀನಾ ಸರ್ಕಾರಕ್ಕೆ ಎಚ್ಚರಿಸಲಿದ್ದೇವೆ ಎಂದಿದ್ದಾರೆ.

2.90 ಲಕ್ಷ ಜನರ ಸಾವಿಗೆ ಕಾರಣವಾಗಿರುವ ಕೊರೋನಾ ವೈರಸ್​ ಹುಟ್ಟಿಗೆ ಚೀನಾವೇ ಕಾರಣ ಎಂದಿರುವ ಒಬ್ರಿಯೆನ್, ಕೊರೋನಾದಂತಹ ಪಿಡುಗುಗಳು ಲ್ಯಾಬ್​ಗಳಿಂದ ಹುಟ್ಟಿರಲಿ ಅಥವಾ ವೆಟ್ ಮಾರ್ಕೆಟ್​ನಿಂದ ಹುಟ್ಟಿರಲಿ. ಎರಡೂ ಕೂಡ ಸರಿಯಲ್ಲ.

ಸಾರ್ಸ್, ಹಕ್ಕಿಜ್ವರ, ಹಂದಿಜ್ವರ, ಕೊರೋನಾ.. ಹೀಗೆ  ಕಳೆದ 20 ವರ್ಷದಲ್ಲಿ 5 ಪಿಡುಗುಗಳು ಚೀನಾದಿಂದಲೇ ಬಂದಿವೆ. ಚೀನಾದಲ್ಲಿ ಹುಟ್ಟಿದ ಇಂತಹ ಕಾಯಿಲೆಯಿಂದ ಇಡೀ ವಿಶ್ವವನ್ನ ಎಷ್ಟು ದಿನಗಳವರೆಗೆ ಆರೋಗ್ಯ ತುರ್ತುಪರಿಸ್ಥಿತಿಯಲ್ಲಿ ಇಡಲು ಸಾಧ್ಯ ಅಂ ಕಿಡಿಕಾರಿದ್ದಾರೆ.

ಚೀನಾಗೆ ಸಹಾಯ ಮಾಡಲು ನಾವು ತಜ್ಞ ವೈದ್ಯರ ತಂಡವನ್ನು ಕಳಿಸಲು ಮುಂದಾಗಿದ್ದೆವು. ಆದ್ರೆ ಚೀನಾ ಸರ್ಕಾರ ಅದನ್ನು ತಿರಸ್ಕರಿಸಿತು ಅಂತ ಅಮೆರಿಕದ ಭದ್ರತಾ ಸಲಹೆಗಾರ ರಾಬರ್ಟ್ ಒಬ್ರಿಯೆನ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply