ಜಮ್ಮು ಕಾಶ್ಮೀರದ ಅನಂತ್​ನಾಗ್​ನಲ್ಲಿ ಐಎಸ್​ ಉಗ್ರನ ಹತ್ಯೆ

masthmagaa.com:

ಜಮ್ಮು ಕಾಶ್ಮೀರದ ಅನಂತ್​​ನಾಗ್​ನಲ್ಲಿ ಐಎಸ್ ಉಗ್ರನೊಬ್ಬನನ್ನು ಭದ್ರತಾ ಸಿಬ್ಬಂದಿ ಹೊಡೆದುರುಳಿಸಿದ್ದಾರೆ. ಮೃತ ಉಗ್ರನನ್ನು ಫಹೀಮ್ ಭಟ್ ಅಂತ ಗುರುತಿಸಲಾಗಿದೆ. ಇತ್ತೀಚೆಗೆ ಬಿಜ್​​ಬೆಹಾರ ಪೊಲೀಸ್ ಠಾಣೆ ಎಎಸ್​ಐ ಮೊಹ್ದ್​​ ಅಶ್ರಫ್​​ ಹತ್ಯೆಯಲ್ಲಿ ಭಾಗಿಯಾಗಿದ್ದ ಅಂತ ಗೊತ್ತಾಗಿದೆ. ಇನ್ನು ನಿನ್ನೆ ನಡೆದ ಎನ್​​ಕೌಂಟರ್​​ನಲ್ಲಿ ಮೃತಪಟ್ಟ ನಾಲ್ವರು ಉಗ್ರರ ಪೈಕಿ ಇಬ್ಬರು ಲಷ್ಕರ್ ಮತ್ತು ಅನ್ಸರ್ ಗಜ್ವತ್ ಉಲ್ ಹಿಂದ್ ಉಗ್ರರು ಸೇರಿದ್ದಾರೆ ಅಂತ ಗೊತ್ತಾಗಿದೆ. ಇದೇ ವೇಳೆ ಕಾಶ್ಮೀರದ ಪುಲ್ವಾಮದಲ್ಲಿ ಪೊಲೀಸ್ ಪೋಸ್ಟ್ ಒಂದರ ಮೇಲೆ ಉಗ್ರರು ಸ್ಫೋಟಕಗಳನ್ನ ಎಸೆದು ಪರಾರಿಯಾಗಿದ್ದಾರೆ.

-masthmagaa.com

Contact Us for Advertisement

Leave a Reply