BBMP ವ್ಯಾಪ್ತಿಯ ತೆರಿಗೆ ಬಾಕಿ ಮೇಲಿನ 50% ತೆರಿಗೆ ದಂಡ ಇಳಿಕೆ!

masthmagaa.com:

BBMP ವ್ಯಾಪ್ತಿಯ ಆಸ್ತಿ ತೆರಿಗೆದಾರರಿಂದ ಬಾಕಿ ಹಣವಸೂಲಿಗಾಗಿ ರಾಜ್ಯ ಸರ್ಕಾರ ಹೊಸ ಪ್ಲ್ಯಾನ್‌ ಮಾಡಿದೆ. BBMP ವ್ಯಾಪ್ತಿಯಡಿಯಲ್ಲಿನ ತೆರಿಗೆ ಬಾಕಿ ಮೇಲಿನ 50% ತೆರಿಗೆ ದಂಡವನ್ನ ರಾಜ್ಯ ಸರ್ಕಾರ ಮನ್ನಾ ಮಾಡಲಿದೆ ಅಂತ ಗೊತ್ತಾಗಿದೆ. ಇದಕ್ಕೆ ಸಂಬಂಧಿಸಿದಂತೆ ವಿಧಾನಸಭೆ ಅಧಿವೇಶನದಲ್ಲಿ BBMP(ತಿದ್ದುಪಡಿ) ವಿಧೇಯಕ 2024 ರ ಬಿಲ್‌ ಅಂಗೀಕಾರವಾಗಿದೆ. ಅಂದ್ಹಾಗೆ ಬೆಂಗಳೂರು ನಗರಾಭಿವೃದ್ದಿ ಸಚಿವ ಡಿ.ಕೆ. ಶಿವಕುಮಾರ್‌ ಸದನದಲ್ಲಿ ಈ ಬಗ್ಗೆ ಬಿಲ್‌ ಮಂಡಿಸಿದ್ರು. ಈ ನಿರ್ಣಯದ ಮೂಲಕ ಸುಮಾರು 15 ಲಕ್ಷ ಜನರಿಂದ BBMP ಗೆ 1ಸಾವಿರ ಕೋಟಿಯಷ್ಟು ಆಸ್ತಿ ತೆರಿಗೆ ಬರಲಿದೆ ಅಂತ ವರದಿಯಾಗಿದೆ.

-masthmagaa.com

Contact Us for Advertisement

Leave a Reply