ಉತ್ತರ ಪ್ರದೇಶದ ಬಾಘಪತ್‌ನ ವಿವಾದಿತ ಪ್ರದೇಶ ಹಿಂದೂಗಳ ಪಾಲು!

masthmagaa.com:

ಉತ್ತರ ಪ್ರದೇಶದ ಬಾಘಪತ್‌ನ 53 ವರ್ಷದ ಹಳೆ ಕೇಸ್‌ವೊಂದರಲ್ಲಿ ಸ್ಥಳೀಯ ಕೋರ್ಟ್‌ ಹಿಂದೂಗಳ ಪರ ತೀರ್ಪು ನೀಡಿದೆ. ಮಹಾಭಾರತ ಕಾಲದ ʼಲಕ್ಷಗೃಹ” ಅಂತ ನಂಬಿರೋ ಈ ಪ್ರದೇಶದ ಬಗ್ಗೆ ಮುಸ್ಲಿಂ ಪರ ವಕೀಲರು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ಕೋರ್ಟ್ ಆದೇಶ ನೀಡಿದೆ. ಅಂದ್ಹಾಗೆ 1970ರಲ್ಲಿ ಬಾಘಪತ್‌ ಸೆಶನ್ಸ್‌ ಕೋರ್ಟ್‌ನಲ್ಲಿ ವಿವಾದಿತ ಬರ್ನಾವಾ ಪ್ರದೇಶದ ಬಗ್ಗೆ ಕೇಸ್‌ ದಾಖಲಾಗಿತ್ತು. ಅಲ್ಲದೆ ಇತ್ತೀಚಿಗೆ ಆ ಜಾಗ ನಮ್ಮ ದರ್ಗಾ ಹಾಗೂ ಸ್ಮಶಾನ ಭೂಮಿ ಅಂತೇಳಿ ಮುಸ್ಲಿಂಮರು ಕೋರ್ಟ್‌ ಮೊರೆ ಹೋಗಿದ್ರು. ಆದ್ರೆ ಈ ಅರ್ಜಿ ವಜಾ ಗೊಳಿಸಿರೋ ಕೋರ್ಟ್‌ ಇದು ಹಿಂದೂಗಳ ಪಾಲಿನ ಪ್ರದೇಶ ಅಂತ ತೀರ್ಪು ನೀಡಿದೆ.

-masthmagaa.com

Contact Us for Advertisement

Leave a Reply