ತೈವಾನ್​​ ಏರ್ ​​​ಡಿಫೆನ್ಸ್​​​ ಝೋನ್​​ಗೆ ಬಂತು ಚೀನಾದ 52 ವಿಮಾನ!

masthmagaa.com:

ಪದೇ ಪದೇ ತೈವಾನ್​​ ಬೆದರಿಕೆ ಒಡ್ಡುತ್ತಲೇ ಇರೋ ಚೀನಾ ಈಗ ಹದ್ದು ಮೀರಿ ವರ್ತಿಸೋಕೆ ಶುರುಮಾಡಿದೆ. ನಿನ್ನೆ ಒಂದೇ ದಿನ 52 ಯುದ್ಧ ವಿಮಾನಗಳನ್ನು ತೈವಾನ್​ನ ಏರ್​ ಡಿಫೆನ್ಸ್ ಝೋನ್​​ಗೆ ಕಳುಹಿಸಿದೆ. ಇವುಗಳ ಪೈಕಿ 36 ಫೈಟರ್ ಜೆಟ್, 12 ಪರಮಾಣು ದಾಳಿ ನಡೆಸೋ ತಾಕತ್ತು ಇರೋ ವಿಮಾನ ಮತ್ತು ನಾಲ್ಕು ಇತರೆ ವಿಮಾನ ಹಾರಾಟ ನಡೆಸಿವೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ತೈವಾನ್​, ಚೀನಾ ಈ ರೀತಿ ಬೇಜವಾಬ್ದಾರಿಯ ಪ್ರಚೋದನಕಾರಿ ಕೃತ್ಯಗಳನ್ನು ಬಿಟ್ಟು ಬಿಡಬೇಕು.. ಚೀನಾ ನಿರಂತರವಾಗಿ ತೈವಾನ್ ಜಲಸಂಧಿಯಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕದಡುತ್ತಿದೆ ಅಂತ ಕೆಂಡಕಾರಿದೆ. ಅಂದಹಾಗೆ ಕಳೆದ ಕೆಲ ದಿನಗಳಿಂದ ಚೀನಾದ ಯುದ್ಧ ವಿಮಾನಗಳ ತೈವಾನ್ ಏರ್​ ಡಿಫೆನ್ಸ್ ಝೋನ್ ಪ್ರವೇಶಿಸೋ ಪ್ರಕರಣಗಳು ಜಾಸ್ತಿಯಾಗುತ್ತಲೇ ಇದೆ. ಕಳೆದ ಶುಕ್ರವಾರ ಚೀನಾ ನ್ಯಾಷನಲ್ ಡೇ ಆಚರಿಸಿಕೊಂಡ ದಿನದಿಂದ ಈವರೆಗೆ ಸುಮಾರು 150 ವಿಮಾನಗಳು ತೈವಾನ್ ಏರ್​ ಡಿಫೆನ್ಸ್ ಝೋನ್​ನಲ್ಲಿ ಹಾರಾಟ ನಡೆಸಿವೆ.

ಅಮೆರಿಕ ಕೂಡ ಚೀನಾದ ಕೃತ್ಯವನ್ನು ಖಂಡಿಸಿದೆ. ತೈವಾನ್ ವಿಚಾರದಲ್ಲಿ ಚೀನಾದ ಪ್ರಚೋದನಕಾರಿ ನಡುವಳಿಕೆ ನೋಡಿದ್ರೆ ಆತಂಕವಾಗ್ತಿದೆ. ಇದ್ರಿಂದ ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆ ಹಾಳಾಗ್ತಿದೆ ಅಂತ ಕಿಡಿಕಾರಿದೆ. ಜೊತೆಗೆ ತೈವಾನ್ ಮೇಲಿನ ತನ್ನ ಮಿಲಿಟರಿ, ರಾಜತಾಂತ್ರಿಕ ಮತ್ತು ಆರ್ಥಿಕ ಒತ್ತಡ ಹೇರೋದನ್ನು ನಿಲ್ಲಿಸಬೇಕು ಅಂತ ಒತ್ತಾಯಿಸಿದೆ.

-masthmagaa.com

Contact Us for Advertisement

Leave a Reply